ಸಿಬ್ಬಂದಿಯ ಮನೆಯ ಶುಭಕಾರ್ಯಕ್ಕೆ ಹೋಗಲಿಕ್ಕಿದ್ದುದರಿಂದ ಅರ್ಧ ಗಂಟೆ ತಡವಾಗಿತ್ತು, ಬಾಗಿಲಿಗೆ ಬರೆದು ಅಂಟಿಸಿದ್ದೆವು : ರೈ ಇಂಡೇನ್ ಗ್ಯಾಸ್ ಕಚೇರಿ ಸ್ಪಷ್ಟನೆ

0

ನಮ್ಮ ಸಂಸ್ಥೆಯ ಸಮಯ ಪಾಲನೆ ಸರಿ ಇಲ್ಲ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಈ ದಿನ ನಮ್ಮ ಸಂಸ್ಥೆಯ ಸಿಬ್ಬಂದಿಯ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಅರ್ಧ ಗಂಟೆ ತಡವಾಗಿದೆ. ನಮ್ಮ ಕಚೇರಿಯ ಮಧ್ಯಾಹ್ನ ಊಟದ ಸಮಯ ಒಂದು 1.30 ರಿಂದ 2:30 ಆಗಿರುತ್ತದೆ.

ಈ ದಿನ ಕಾರ್ಯಕ್ರಮ ಇದ್ದುದರಿಂದ 3.05 ಗಂಟೆಗೆ ಬಂದಿರುತ್ತೇವೆ. ಗ್ರಾಹಕರಿಗೆ ತೊಂದರೆಯಾಗದಂತೆ ನಾವು ಬಾಗಿಲಿನ ಮೇಲೆ ಕಾರ್ಯಕ್ರಮ ಇರುವುದರಿಂದ ಅರ್ಧ ಗಂಟೆ ತಡವಾಗಿ ಕಚೇರಿಯನ್ನು ತೆರೆಯುವುದಾಗಿ ಮಾಹಿತಿಯನ್ನು ನೀಡಿದ್ದೆವು. ಬೇರೆ ದಿನಗಳಲ್ಲಿ ನಾವು ಕಚೇರಿಯ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತೇವೆ ಮತ್ತು ನೀಡುತ್ತಿದ್ದೇವೆ.

ಪ್ರತಿ ತಿಂಗಳ ಒಂದನೇ ದಿನಾಂಕದಂದು ದರ ಬದಲಾವಣೆ ಇರುವುದರಿಂದ ಸಾಫ್ಟ್ವೇರ್ ನಲ್ಲಿ ಅಪ್ಲೋಡ್ ಆಗಲು ಸಮಯ ತೆಗೆದುಕೊಳ್ಳುವುದರಿಂದ ಗ್ರಾಹಕರಿಗೆ ಸೇವೆಯನ್ನು ನೀಡಲು ವಿಳಂಬವಾಗುತ್ತದೆ ಎಂದು ಭಿತ್ತಿ ಪತ್ರದ ಮೂಲಕ ಬಾಗಿಲಿನಲ್ಲಿ ಮಾಹಿತಿಯನ್ನು ಅಂಟಿಸಿರುತ್ತೇವೆ ಎಂದು ಸುಳ್ಯದ ಇಂಡೇನ್ ಗ್ಯಾಸ್ ಏಜೆನ್ಸಿ ಯವರು ಸುದ್ದಿಗೆ ತಿಳಿಸಿದ್ದಾರೆ.