ಗುತ್ತಿಗಾರಿನಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ : ಪೂರ್ವಭಾವಿ ಸಭೆ

0


ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಿಎಂ ಶ್ರೀ ಗುತ್ತಿಗಾರು ಹಾಗೂ ಸರಕಾರಿ ಪ್ರೌಢಶಾಲೆ ಗುತ್ತಿಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಬಾರಿ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ ಹಾಗೂ ಬಾಲಕಿಯರ ಕಬ್ಬಡಿ ಪಂದ್ಯಾಟವು ಗುತ್ತಿಗಾರಿನಲ್ಲಿ ನಡೆಯಲಿದ್ದು ಈ ಬಗ್ಗೆ ಜಂಟಿ ಸಂಸ್ಥೆಯವರು ಮಕ್ಕಳ ಪೋಷಕರು ಹಾಗೂ ವಿವಿಧ ಸಂಘ-ಸಂಸ್ಥೆಯವರ ಸಭೆಯನ್ನು ಸೆ.೨ ರಂದು ಗುತ್ತಿಗಾರಿನ ಪಿ.ಎಂ.. ಶ್ರೀ. ಶಾಲೆಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ.ಎಂ.ಸಿ ಅಧ್ಯಕ್ಷ ವೆಂಕಟ್ ದಂಬೆ ಕೊಡಿ ವಹಿಸಿದ್ದರು. ಸಭೆಯಲ್ಲಿ ಈ ಹಿಂದೆ ರಚಿಸಿದಂತೆ ಕಾರ್ಯಕ್ರಮದ ಯಶಸ್ವಿಗಾಗಿ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರಗಳನ್ನುಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅವರುಗಳು ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ಕಬಡ್ಡಿ ಪಂದ್ಯಾಟದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಮಳೆಗಾಲವಾದ್ದರಿಂದ ಪಂದ್ಯಾಟ ಸಾಂಗವಾಗಿ ನಡೆಯಲು ಮೈದಾನಕ್ಕೆ ಬೃಹತ್ ಮಟ್ಟದಲ್ಲಿ ಸೀಟ್ ಅಳವಡಿಕೆ, ಗ್ಯಾಲರಿ ನಿರ್ಮಾಣ, ಜಿಲ್ಲೆಯ ವಿವಿಧ ಕಡೆಗಳಿಂದ ಬರುವ ಸ್ಪರ್ಧಿಗಳಿಗೆ ಊಟೋಪಚಾರ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.


ಸುಮಾರು ನಾಲ್ಕರಿಂದ ಐದು ಲಕ್ಷದಷ್ಟು ಖರ್ಚು ತಗಲುವುದರಿಂದ ಮಕ್ಕಳ ಪೋಷಕರಿಂದ ಒಂದಷ್ಟು ಹಾಗೂ ದಾನಿಗಳಿಂದ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಸಂಗ್ರಹಿಸುವ ಬಗ್ಗೆ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಕೈಜೋಡಿಸಿದರು.


ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ. ಶ್ರೀಮತಿ ಉಮಾವತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ ಮತ್ತಿತರು ಉಪಸಿತರಿದ್ದರು. ಪ್ರೌಢಶಾಲಾ ವಿಭಾಗದ ಶಿಕ್ಷಕರು ಹಾಗೂ ಎಸ್.ಡಿಎಂಸಿ ಪದಾಧಿಕಾರಿಗಳು ಉಪಸಿತರಿದ್ದರು. (ವರದಿ :ಡಿ.ಎಚ್. ಹಾಲೆಮಜಲು)