ಕೆ.ವಿ.ಜಿ. ಐ.ಪಿ.ಎಸ್ ನಲ್ಲಿ ವೈಯುಕ್ತಿಕ ನೈರ್ಮಲ್ಯ ಕಾರ್ಯಕ್ರಮ ವೈಯುಕ್ತಿಕ ನೈರ್ಮಲ್ಯ ಮಾನಸಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮ: ಡಾ. ಭವ್ಯ ಎಚ್.ಯು.

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೆ . 2 ರಂದು ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ. ಉಜ್ವಲ್ ಯು ಜೆ ಅವರ ಮಾರ್ಗದರ್ಶನದಂತೆ, “ವೈಯಕ್ತಿಕ ನೈರ್ಮಲ್ಯ ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮುಖ್ಯವಾದ ಅಂಶ ” ಎಂಬ ಆಶಯದೊಂದಿಗೆ ಶಾಲೆಯ 6 ರಿಂದ 10 ನೇ ತರಗತಿಯ ಬಾಲಕರಿಗೆ ಹಾಗೂ ಬಾಲಕಿಯರಿಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.


ಕೆ.ವಿ.ಜಿ. ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಡಾ.ಭವ್ಯ ಎಚ್.ಯು ಆಗಮಿಸಿ ಶಾಲಾ ಬಾಲಕಿಯರಿಗೆ ವೈಯುಕ್ತಿಕ ನೈರ್ಮಲ್ಯ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ಉತ್ತಮ ಸ್ವಾಭಿಮಾನ, ಆತ್ಮವಿಶ್ವಾಸ ಹಾಗೂ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.


ಕೆ.ವಿ.ಜಿ. ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿನ ಶಿಶುವೈದ್ಯ ಶಾಸ್ತ್ರ ವಿಭಾಗದ ಸಹ ಉಪನ್ಯಾಸಕರಾದ ಡಾ. ಶ್ಯಾಮ್ ಸುಂದರ್ ಎಸ್ ಆಗಮಿಸಿ ಶಾಲಾ ಬಾಲಕರಿಗೆ ವೈಯುಕ್ತಿಕ ನೈರ್ಮಲ್ಯವು ನಮ್ಮ ದೈನಂದಿನ ಜೀವನದ ಅವಿಬಾಜ್ಯ ಅಂಶವಾಗಿದೆ, ಇದು ಶುಚಿತ್ವವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಯೋಗಕ್ಷೇಮ ಉತ್ತೇಜಿಸುವ ಗುರಿಯನ್ನು ಹೊಂದಿರುವ ಹಲವಾರು ಅಭ್ಯಾಸಗಳನ್ನು ಒಳಗೊಂದಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ಎಸ್. ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ, ಹೌಸ್ ಕೀಪಿಂಗ್ ಸಂಯೋಜನಾಧಿಕಾರಿ ಸೌಮ್ಯ ಕೆ.ಡಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು 9ನೇ ತರಗತಿ ವಿದ್ಯಾರ್ಥಿಗಳಾದ ಮನ್ವಿತಾ, ಸಿಮಾ ಆಯಿಶ, ದೀಕ್ಷಿತ್ ಮತ್ತು ರಿಹಾನ್ ನಿರೂಪಿಸಿ, ಸಂಜನಾ ಮತ್ತು ದೀಕ್ಷಿತ್ ಸ್ವಾಗತಿಸಿ, ಸೋನಾ ನರ್ಕೋಡು ಹಾಗೂ ರಿಹಾನ್ ವಂದಿಸಿದರು.