ವಿವಿಧತೆಯಲ್ಲಿ ಏಕತೆಯನ್ನು ಸಾರುವ ಧರ್ಮ ಹಿಂದೂ ಧರ್ಮ. ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವಂತ ಯೋಗಿಯಂತಹ ನಾಯಕರ ಅವಶ್ಯಕತೆ ಇದೆ- ಪ್ರತಾಪ ಸಿಂಹ
ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯು ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿ ಸೆ.4 ರಂದು ಜರುಗಿತು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಂಸದ ಅಂಕಣಕಾರ ಪ್ರತಾಪ ಸಿಂಹ ರವರು ದಿಕ್ಸೂಚಿ ಭಾಷಣ ಮಾಡಿದರು.
ಹಿರಿಯ ದೈವ ನರ್ತಕ ಕೇಪು ಅಜಿಲ ರವರು ದೀಪ ಪ್ರಜ್ವಲಿಸಿದರು.
ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಪುನೀತ್ ಅತ್ತಾವರ, ವಿ.ಹೆಚ್.ಪಿ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ ತೆಂಕಿಲ, ವಿ.ಹೆಚ್.ಪಿ.ನಿಕಟ ಪೂರ್ವ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ, ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ನವೀನ್ ಎಲಿಮಲೆ, ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಜಿಲ್ಲಾ ಸಾಪ್ತಾಹಿಕ್ ಮಿಲನ್ ರೂಪೇಶ್ ಪೂಜಾರಿಮನೆ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್,ಶಿಲ್ಪಾ ಸುದೇವ್, ಪ್ರಮುಖರಾದ ವೆಂಕಟ್ ದಂಬೆಕೋಡಿ, ಶ್ರೀಪತಿ ಭಟ್ ಮಜಿಗುಂಡಿ, ಉಮೇಶ್ ಪಿ.ಕೆ, ಹರೀಶ್ ಕಂಜಿಪಿಲಿ, ನಾರಾಯಣ ಕೇಕಡ್ಕ,ಸುಭೋದ್ ಶೆಟ್ಟಿ ಮೇನಾಲ, ಸೋಮನಾಥ ಪೂಜಾರಿ, ಚಂದ್ರಶೇಖರ ಅಡ್ಪಂಗಾಯ, ಚನಿಯ ಕಲ್ತಡ್ಕ, ರಾಜೇಶ್ ಕಿರಿಭಾಗ, ಸುನಿಲ್ ಕೇರ್ಪಳ, ನಿಕೇಶ್ ಉಬರಡ್ಕ ಮತ್ತಿತರರು ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮೊಸರು ಕುಡಿಕೆ ಉತ್ಸವದ ಸ್ಥಾಪಕಾದ್ಯಕ್ಷ ವಿನಯ ಕಂದಡ್ಕ ರವರು ಕಳೆದ ಹತ್ತು ವರ್ಷಗಳ ಹಿಂದೆ ಸಂಗ್ರಹವಾಗಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದ ರೂ.1,73,800/-ಮೊತ್ತದ ಚೆಕ್ ಸಂಘಕ್ಕೆ ಹಸ್ತಾಂತರಿಸಿದರು.
ನಿಕಟಪೂರ್ವಾಧ್ಯಕ್ಷರುಗಳನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಓಂಕಾರ ಐಕ್ಯಮಂತ್ರದದೊಂದಿಗೆ ಧಾರ್ಮಿಕ ಸಭೆಯು ಆರಂಭಗೊಂಡಿತು. ಕು.ಸ್ಪೂರ್ತಿ ರೈ ಬೂಡು ವೈಯಕ್ತಿಕ ಗೀತೆ ಹಾಡಿದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ನವೀನ್ ಎಲಿಮಲೆ ವಂದಿಸಿದರು. ಪುತ್ತೂರು ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಶಾಂತಿ ಮಂತ್ರ ಪಠಿಸಲಾಯಿತು. ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಉತ್ಸವ ಸಮಿತಿಯ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.
ಸಭೆಯ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕ ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ನಡೆಯಿತು.