ಸುಳ್ಯ ಪಶುಪಾಲನಾ ಇಲಾಖೆಯ ವತಿಯಿಂದ ಚಿಕಿತ್ಸೆ
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿಗೆ ಸ್ಥಳೀಯರು ಸೇರಿ ಉಪಚರಿಸಿ, ಆರೈಕೆ ಮಾಡಿ, ಸುಳ್ಯದ ಪಶುಪಾಲನಾ ಇಲಾಖೆಯ ವತಿಯಿಂದ ಚಿಕಿತ್ಸೆ ಕೊಡಿಸಿದ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಸೆ.5ರಂದು ಸಂಭವಿಸಿದೆ.
ಸೆ.4ರಂದು ಬೆಳಿಗ್ಗೆ ರಸ್ತೆ ದಾಟುತ್ತಿದ್ದ ಹೋರಿಯೊಂದಕ್ಕೆ ವಾಹನ ಢಿಕ್ಕಿ ಹೊಡೆದು ಕೊಂಬು ಮರಿದು ಗಾಯಗೊಂಡಿತ್ತೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಧರ್ಮಪಾಲ ಚೆಂಬು, ಗಣೇಶ್ ಆಚಾರ್ಯ , ಶರತ್ ಕೀಲರು ಸಂಪಾಜೆ ಸೇರಿದಂತೆ ಮತ್ತಿತರ ಸ್ಥಳೀಯರು ಸೇರಿ ಕೊಡಗು ಸಂಪಾಜೆ ಪಶುವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಚಿಕಿತ್ಸೆ ಕೊಡಿಸಿದ್ದರು. ಸೆ.5ರಂದು ಬೆಳಿಗ್ಗೆ ಹೋರಿ ಸಂಪಾಜೆಯ ಕೈಪಡ್ಕದಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಆಯಾಸದಿಂದಾಗಿ ಮಲಗಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸೇರಿ ಸುಳ್ಯದ ಪಶು ಪಾಲನಾ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಬಳಿಕ ಸುಳ್ಯದಿಂದ ವೈದ್ಯಾಧಿಕಾರಿಗಳು ಆಗಮಿಸಿದ ಬಳಿಕ ಸ್ಥಳೀಯರ ಸಹಕಾರದಿಂದ ಹೋರಿಗೆ ಚಿಕಿತ್ಸೆ ನೀಡಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿ ನಾಗರಾಜ್ ಸಿಬ್ಬಂದಿಗಳಾದ ಪ್ರಜ್ವಲ್, ಶ್ರೀವತ್ಸ, ಸ್ಥಳೀಯರಾದ ಧರ್ಮಪಾಲ , ಗಣೇಶ್ ಆಚಾರ್ಯ, ಮನು, ವಿನು ಕೈಪಡ್ಕ, ಪ್ರಮೋದ್ ಕೈಪಡ್ಕ ಮೊದಲಾದವರು ಉಪಸ್ಥಿತರಿದ್ದು, ಸಹಕರಿಸಿದರು.