ಬೆಳ್ಳಾರೆಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ : ಸನ್ಮಾನ

0

“ಮುಗ್ದ ಮಕ್ಕಳಿಗೆ ಶಿಕ್ಷಣವೆಂಬ ಜ್ಞಾನದ ರೂಪಕೊಟ್ಟು ಸುಂದರಮೂರ್ತಿಯನ್ನಾಗಿ ಮಾಡುವುದೇ ಶಿಕ್ಷಕರು. ಆದ್ದರಿಂದ ಶಿಕ್ಷಣ ಕ್ಷೇತ್ರ ಆತ್ಯಂತ ಮಹತ್ವದ್ದು ಮತ್ತು ಲಂಚ ರಹಿತ ಕ್ಷೇತ್ರವೊಂದಿದ್ದರೆ ಅದು ಶಿಕ್ಷಣ ಕ್ಷೇತ್ರ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಸೆ.5 ರಂದು ಬೆಳ್ಳಾರೆ ಕೆ.ಪಿ.ಎಸ್. ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಾನಂದ ಮಾವಜಿ ಮಾತನಾಡಿ ಮೊಬೈಲ್ ಕಾಲದಲ್ಲಿ ಮಕ್ಕಳು ಓದುವುದನ್ನು ಮರೆಯುತ್ತಿದ್ದಾರೆ. ಮಕ್ಕಳು ಪುಸ್ತಕ ಹಾಗೂ ಪತ್ರಿಕೆಯನ್ನು ಓದುವಂತೆ ಶಿಕ್ಷಕರು ಮಾಡಬೇಕು” ಎಂದು ಹೇಳಿದರು.

ಪುತ್ತೂರು ಬಪ್ಪಳಿಕೆ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಜೆ ದಿಕ್ಸೂಚಿ ಭಾಷಣ ಮಾಡಿ, ಶಿಕ್ಷಕರು ಪ್ರತೀ ದಿನ ಅಪ್ ಡೇಟ್ ಆಗಬೇಕು ” ಎಂದು ಹೇಳಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಮುಖ್ಯ ಅತಿಥಿಗಳಾಗಿದ್ದರು.

ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುನಾರ್ ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಎಸ್., ಅಕ್ಷರದಾಸೋಹ ಅಧಿಕಾರಿ ಶ್ರೀಮತಿ ವೀಣಾ ಎಂ.ಟಿ., ಅಧಿಕಾರಿಗಳ ಸಂಘದ ಕಾರ್ಯದರ್ಶಿ ಪ್ರಕಾಶ ಮೂಡಿತ್ತಾಯ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್, ಜಿಪಿಟಿ ಅಧ್ಯಕ್ಷ ಸುನಿಲ್ ಕುಮಾರ್, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ, ಸೂಫಿ ಪೆರಾಜೆ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ,
ಬೆಳ್ಳಾರೆ ಕೆ.ಪಿ.ಎಸ್. ಪ್ರಾಂಶುಪಾಲ ಜನಾರ್ಧನ , ಉಪಪ್ರಾಂಶುಪಾಲೆ ಉಮಾ ಕುಮಾರಿ, ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್ ವೇದಿಕೆಯಲ್ಲಿ ಇದ್ದರು.

ಶಿಕ್ಷಕಿ ಜಯಶೀಲ ಪ್ರಾರ್ಥಿಸಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.‌ ಸ್ವಾಗತಿಸಿದರು.

ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ, ಶ್ರೀಮತಿ ಉಷಾ , ಶ್ರೀಮತಿ ವಿಜಯ ಹಾಗೂ ದೇವಿಪ್ರಸಾದ್ ನಾಡಗೀತೆ, ರೈತ ಗೀತೆ ಹಾಡಿದರು. ಶಿಕ್ಷಕರುಗಳಾದ ದಿನೇಶ್ ಮಾಚಾರ್, ಶ್ರೀಪ್ರಿಯಾ, ಮಮತಾ ಜಯನಗರ, ಆಶಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ತಾಲೂಕು ಯೋಜನಾಧಿಕಾರಿ ಕಚೇರಿ ಸುಳ್ಯ, ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು.