ಗೂನಡ್ಕ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿ

0

ಭಜರಂಗದಳ ಕಾರ್ಯಕರ್ತರಿಂದ ಆರೈಕೆ – ಸುಳ್ಯ ಪಶುಪಾಲನಾ ಆಸ್ಪತ್ರೆಗೆ ರವಾನೆ

ಮೂರು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ದನವೊಂದು ಮೃತಪಟ್ಟಿದ್ದು, ಗಾಯಗೊಂಡಿದ್ದ ಹೋರಿಯನ್ನು ಸುಳ್ಯದ ಕಾರ್ಯಕರ್ತರು ಪಿಕಪ್ ಮೂಲಕ ಸುಳ್ಯದ ಪಶುಪಾಲನಾ ಆಸ್ಪತ್ರೆಗೆ ಕೊಂಡೊಯ್ದು , ಚಿಕಿತ್ಸೆ ಕೊಡಿಸಿದರು.

ಈ ಸಂದರ್ಭದಲ್ಲಿ ಭಜರಂಗದಳದ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ವಿಶ್ವ ಹಿಂದೂ ಪರಿಷತ್ ಕೋಶಾಧಿಕಾರಿ ನವೀನ್ ಎಲಿಮಲೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಾಪ್ತಾಹಿಕ್ ಮಿಲನ್ ರೂಪೇಶ್ ಪೂಜಾರಿಮನೆ, ಸುಳ್ಯದ ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಭಜರಂಗದಳ ಸಹ ಸಂಚಾಲಕ ಸನತ್ , ರಕ್ಷಿತ್, ಮಹೇಶ್, ನೂತನ್, ಮನೀಶ್ ಗೂನಡ್ಕ, ವರದರಾಜ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಿದಾನಂದ ಮೂಡನಕಜೆ ಮತ್ತಿತರ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.