ಸೆ.7 : ರೆಂಜಾಳ ಕ್ಷೇತ್ರದಲ್ಲಿ ಚೌತಿ ಉತ್ಸವ

0

ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಗಳ ಕಾರಣಿಕ ಕ್ಷೇತ್ರ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಉತ್ಸವವು ಸೆ.7ರಂದು ನಡೆಯಲಿದೆ.

ಬೆಳಿಗ್ಗೆ ಉಷಾಃ ಪೂಜೆ, ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವರಿಗೆ 12 ತೆಂಗಿನಕಾಯಿ ಗಣಪತಿ ಹವನ ನಡೆದು ಬಳಿಕ ಶನಿಪೂಜೆ ನಡೆಯಲಿದ್ದು, ಅಕ್ಷರಾಭ್ಯಾಸ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.

ಸಂಜೆ ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ಮತ್ತು ಉಭಯ ಗ್ರಾಮಸ್ಥರಿಂದ ಚೌತಿ ಪ್ರಯುಕ್ತ ವಿಶೇಷ ಭಜನಾ ಸೇವೆ ನಡೆಯಲಿದೆ. ರಾತ್ರಿ ಶ್ರೀಮತಿ ಚೋಮಕ್ಕ ಮತ್ತು ಮಕ್ಕಳು ಕೊಟ್ರಡ್ಕ ಇವರಿಂದ ಚೌತಿ ಪ್ರಯುಕ್ತ ವಿಶೇಷ ಪೂಜೆ, ಬಳಿಕ ಸಾಮೂಹಿಕ ಕಾರ್ತಿಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.