ಜೋಸ್ ಆಲುಕ್ಕಾಸ್ ನಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಶಿಕ್ಷಕಿಯರಿಗೆ ಸನ್ಮಾನ

0

ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿವಿಧ ಶಾಲಾ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು.

ಬೆಳಿಯೂರುಕಟ್ಟೆ ಪ.ಪೂ ಕಾಲೇಜಿನ ಶಿಕ್ಷಕಿ ಇಂದಿರಾ ಭಂಡಾರಿರವರು ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ಸಂಬಂಧ ಹಲವಾರು ವರುಷಗಳದ್ದಾಗಿದೆ.


ಸಂಸ್ಥೆ ವ್ಯವಹಾರದ ಲಾಭದಲ್ಲಿ ಒಂದಂಶವನ್ನು ಸಿಎಸ್ ಆರ್ ಫಂಡ್ ನ ಮುಖಾಂತರ ಶಾಲೆಗಳಿಗೆ ಸಹಕಾರ ನೀಡುತ್ತಿರುವುದು ಅಭಿನಂದನೀಯ. ಸಂಸ್ಥೆಯ ಸಮಾಜಮುಖಿ ಹಾಗೂ ಮಾನವೀಯ ಕಾರ್ಯ ಇತರರಿಗೆ ಮಾದರಿ. ಶಿಕ್ಷಕರನ್ನು‌ ಗೌರವಿಸುವ ನಿಮ್ಮ ಈ ಒಂದು ಕಾರ್ಯಕ್ರಮ ಎಲ್ಲಾ ಶಿಕ್ಷಕರಿಗೆ ಸಂದ ಗೌರವವಾಗಿದೆ ಎಂದರು.

ಮಾಯಿದೇ ದೇವುಸ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜೊನೆಟ್ ಡಿಸೋಜರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಸ್ಥೆ ನಮ್ಮ ಫ್ಯಾಮಿಲಿಯ ಹಾಗೆ. ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ ನಮ್ಮನ್ನು ಮತ್ತಷ್ಟು ಇಲ್ಲಿಗೆ ಸೆಳೆಯುತ್ತದೆ. ಇಲ್ಲಿ ಗುಣಮಟ್ಟದ ವಸ್ತುಗಳು ಉತ್ತಮ ಬೆಲೆಯಲ್ಲಿ ಲಭಿಸುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿದೆ. ಇವರು ವ್ಯಾಪಾರದೊಂದಿಗೆ ಶಿಕ್ಷಣ ಸಂಸ್ಥೆಗಳ ಅಗತ್ಯತೆಗಳಿಗೆ ಸಹಕಾರ ನೀಡುತ್ತಿರುವುದು ಬಹಳಷ್ಟು ಉತ್ತಮ ಬೆಳವಣಿಗೆಯಾಗಿದೆ ಎಂದರು.


ಬೆಳಿಯೂರುಕಟ್ಟೆ ಪ್ರೌಡಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ, ಸೈಂಟ್ ವಿಕ್ಟರ್‌ ಬಾಲಕೀಯರ ಹೈಸ್ಕೂಲಿನ ಇಂಗ್ಲೀಷ್ ಶಿಕ್ಷಕಿ ರೀನಾ ತೆರೇಸಾ, ಕುಕ್ಕೆ ಸುಬ್ರಹ್ಮಣ್ಯ ಶಾಲಾ ಶಿಕ್ಷಕಿ ವಿನೋದ, ಮುಂಡೂರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ವಿಜಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಖಾ ವ್ಯವಸ್ಥಾಪಕ ರತೀಶ್ ಸಿ.ಪಿ., ಸಹಾಯಕ ವ್ಯವಸ್ಥಾಪಕ ಪ್ರಜೀಶ್, ಅಕೌಂಟೆಂಟ್ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು.


ಸಿಬ್ಬಂದಿ ರಮ್ಯ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.