ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಸೆ.5.ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಲಯನ್ಸ್ ವಲಯಾಧ್ಯಕ್ಷ,ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಪ್ರೊl ರಂಗಯ್ಯ ಶೆಟ್ಟಿಗಾರ್ ಮಾತನಾಡಿ
“ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದ ಕ್ಷೇತ್ರ .ಇದರಲ್ಲಿ ಆಸಕ್ತಿಯಿಂದ ಸೇರಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ.” ಎಂದು ಅವರು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ವಾಸುದೇವ ನಡ್ಕ ಸನ್ಮಾನಿಸಿ ಶುಭ ಹಾರೈಸಿದರು.
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕಂಬಳ, ಸುಳ್ಯ ತಾಲೂಕು ನಿವೃತ್ತ ಶಿಕ್ಷಣ ಸಂಯೋಜಕ ಕುಂಞಣ್ಣ ನಾಯ್ಕ ಬಿಡಾರಕಟ್ಟೆ, ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು, ಪಂಜ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಪುರಂದರ ಪನ್ಯಾಡಿ ರವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ವಲಯಾಧ್ಯಕ್ಷ ಪ್ರೋl ರಂಗಯ್ಯ ಶೆಟ್ಟಿಗಾರ್ ಮತ್ತು ಅವರ ಪತ್ನಿ ಶ್ರೀಮತಿ ವಿಮಲ ರಂಗಯ್ಯ ರವರನ್ನು ಮಾಧವ ಗೌಡ ಜಾಕೆ ರವರು ಸನ್ಮಾನಿಸಿದರು.
ನಿವೃತ್ತ ಶಿಕ್ಷಕ ವಾಸುದೇವ ನಡ್ಕ ರವರನ್ನು ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಸನ್ಮಾನಿಸಿದರು. ಸಭೆಯಲ್ಲಿ ಪಾಲ್ಗೊಂಡ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.
ಕ್ಲಬ್ ನ ಅನ್ನಭಾಗ್ಯ ಯೋಜನೆಯಲ್ಲಿ ಕರಂಬಿಲ ವಸಂತ ರತ್ನ ವಿದ್ಯಾ ಸಂಸ್ಥೆಗೆ ಶ್ರೀಮತಿ ಯಶೋಧಾ ಚಿದಾನಂದ ಬಿಳಿಮಲೆಯವರ ಪ್ರಾಯೋಜಕತ್ವದಲ್ಲಿ ಅಕ್ಕಿಯನ್ನು ಸಂಸ್ಥೆಯ ಸಮಿತಿಯ ಪದಾಧಿಕಾರಿ ಬಾಲಕೃಷ್ಣ ಗೌಡ ಬೊಳಿಯೂರು ರವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರುಣಾಕರ ಎಣ್ಣೆಮಜಲು ವೇದಿಕೆಗೆ ಆಹ್ವಾನಿಸಿದರು. ಶ್ರೀಮತಿ ರಶ್ಮಿ ಪಳಂಗಾಯ ಪ್ರಾರ್ಥಿಸಿದರು. ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು. ಶಶಿಧರ ಪಳಂಗಾಯ ಸನ್ಮಾನ ಪತ್ರ ವಾಚಿಸಿದರು.ತುಕಾರಾಮ ಏನೆಕಲ್ಲು ಸನ್ಮಾನಿಸಿದವರನ್ನು ಪರಿಚಯಿಸಿದರು.ಸುರೇಶ್ ಕುಮಾರ್ ನಡ್ಕ ವಂದಿಸಿದರು.