ನಾಳೆ (ಸೆ.7) : ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ವತಿಯಿಂದ ಶ್ರೀ ಗಣೇಶೋತ್ಸವ ಆಚರಣೆ

0

ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ಮೆರವಣಿಗೆ

ನೆಲ್ಲೂರು ಕೆಮ್ರಾಜೆ ಯುವಕ ಮಂಡಲ ನಾರ್ಣಕಜೆ ಇದರ ವತಿಯಿಂದ 45ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯು ನಾರ್ಣಕಜೆ ವಠಾರದಲ್ಲಿ ನಾಳೆ ನಡೆಯಲಿದೆ.

ಬೆಳಿಗ್ಗೆ 6.30ಕ್ಕೆ ಸ್ಥಳ ಶುದ್ಧಿ, ಗಣಪತಿ ಹೋಮ, ಗಣಪತಿ ಪ್ರತಿಷ್ಠೆ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಸಾರ್ವಜನಿಕ ರಿಗೆ ವಿವಿಧ ಸ್ಪರ್ಧೆಗಳು ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀಮತಿ ಪೂರ್ಣಿಮಾ ಕೃಷ್ಣರಾಜ್ ಬಳಿಗದಿಂದ ಭಕ್ತಿ ರಸಮಂಜರಿ ನಡೆಯಲಿದೆ. ಸಂಜೆ 3.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಮೆರವಣಿಗೆ ನಡೆದು ಮೂರ್ತಿಯ ವಿಸರ್ಜನೆ ನಡೆಯಲಿದೆ.