ನಾಳೆ (ಸೆ.7) : ಮರ್ಕಂಜ ಗೋಳಿಯಡ್ಕದಲ್ಲಿ ಗಣೇಶೋತ್ಸವ ಆಚರಣೆ

0

ಬೆಳಿಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ವೈಭವದ ಮೆರವಣಿಗೆ ಸಂಜೆ ಜಲಸ್ತಂಭನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ ಗೋಳಿಯಡ್ಕ ಮರ್ಕಂಜದಲ್ಲಿ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ನಾಳೆ ನಡೆಯಲಿದೆ.

ಬೆಳಿಗ್ಗೆ ಗಣಪತಿ ವಿಗ್ರಹದ ಆಗಮನ, ಬಳಿಕ ವಿಗ್ರಹ ಪ್ರತಿಷ್ಠಾಪನೆ, ನಂತರ ಗಣಪತಿ ಹವನ, ಬೆಳಗ್ಗಿನ‌ ಪೂಜೆ ನಡೆಯಲಿದೆ. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಗೋಖಿಯಡ್ಕ, ಅಂಗಡಿಮಜಲು, ಬಲ್ನಾಡುಪೇಟೆ, ತೇರ್ಥಮಜಲು ಮಾರ್ಗವಾಗಿ ವಿಜೃಂಭಣೆಯ ಶೋಭಾಯಾತ್ರೆ ನಡೆದು ಕಾಯಿಪಳ್ಳದಲ್ಲಿ ವಿಸರ್ಜನೆ ನಡೆಯಲಿದೆ.