ಅಡಿಕೆ ಬೆಳೆಗಾರರ ಸಹಾಯಕ್ಕೆ ದಾವಿಸಬೇಕಾದ ಕ್ಯಾಂಪ್ಕೋ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ಇರುವುದು ಅಡಿಕೆ ಬೆಳೆಗಾರರ ಪಾಲಿಗೆ ದುರಂತವೇ ಸರಿ . ವಾಸ್ತವವಾಗಿ ರೈತರೂ ಬೆಳೆಸಿದ ಅಡಿಕೆಗೆ ನಮ್ಮ ದೇಶದಲ್ಲಿ ತಕ್ಕುದಾದ ಬೆಲೆ ಇರುತ್ತದೆ ಎಂಬುದನ್ನು ನಾವು ಕರೋನ ಮಹಾಮಾರಿ ಸಮಯದಲ್ಲಿ ಕಂಡುಕೊಂಡಿದ್ದೇವೆ. ಆ ಕಾಲದಲ್ಲಿ ನಮ್ಮ ದೇಶೀಯ ಅಡಿಕೆಗೆ ಕಿಲೊ 1ಕ್ಕೆ 550 ರುಪಾಯಿ ತನಕ ಬಂದಿರುವುದು ಇತಿಹಾಸವೇ ಸರಿ .ಅದಕ್ಕೆ ಕಾರಣ ಬೇರೆ ದೇಶಗಳಿಂದ ಕಾನೂನು ಬಾಹಿರವಾಗಿ ಆಮದು ಆಗುತ್ತಿದ್ದ ಅಡಿಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದ ಕಾರಣವಾಗಿರುತ್ತದೆ ಹಾಗಾಗಿ ನಾವು ಬೆಳೆಸಿದ ಅಡಿಕೆಗೆ ಉತ್ತಮ ಮಾರುಕಟ್ಟೆಧಾರಣೆ ದೊರಕಿರುತ್ತದೆ . ಆದರೆ ಅದರ ಬಳಿಕ ಪರದೇಶದ ಕಳಪೆ ಮಟ್ಟದ ಅಡಿಕೆಯನ್ನು ಕಳ್ಳ ದಾರಿಯ್ ಮೂಲಕ ತರಸಿಕೊಂಡು ಅದನ್ನು ನಮ್ಮ ದೇಶದ ಅಡಿಕೆಯೊಂದಿಗೆ ಬೆರೆಸಿ ವ್ಯವಸ್ತಿತ ಮಾರುಕಟ್ಟಿಯ ಜಾಲದಲ್ಲಿ ನಮ್ಮ ದೇಶದ ಉನ್ನತ ಅದಿಕಾರ ಸ್ಥಾನದಲ್ಲಿರೂವ ರಾಜಕಾರಣಿಯ ಮಕ್ಕಳು ಮಾಡುತ್ತಿರುವ ವ್ಯವಹಾರದಿಂದ ಇವತ್ತು ನಮ್ಮ ದೇಶದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿರವುದು ವಿಪರ್ಯಾಸ . ಆದರೆ ಅಧ್ಯಾವುದು ತಿಳಿದಿಲ್ಲ ಎಂಬಂತಿರುವ ನಮ್ಮ ರಾಜಾಕಾರಣಗಳ ಅಸಡ್ಡೆ ಭಾವನೆ ತೀರಾ ಖಂಡನೀಯ.
ಆದ ಕಾರಣ ತಮ್ಮ ಜವಾಬ್ದಾರಿಯನ್ನು ಅರಿತು ಅಡಿಕೆ ಬೆಳೆಗಾರರ ಸಂಕಷ್ಟಕ್ಕಾಗಿ ವಾರಾಣಸಿ ಸುಬ್ರಯ ಭಟ್ಟರ ನೇತೃತ್ವದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಕ್ಯಾಂಪ್ಕೋ ಸಂಸ್ಥೆ ಯ ಈಗೀನ ಮುಖ್ಯಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಪ್ರಸ್ತುತ ಆಮದು ಆಗುತ್ತಿರುವ ಕಳಪೆ ಮಟ್ಟದ ಅಡಿಕೆಯನ್ನು ತಡಿಯುವಂತೆ ಆಗ್ರಹಿಸಬೇಕಾಗಿದೆ. ಈ ಬಗ್ಗೆ ಕರ್ಣಾಟಕ ಸರ್ಕಾರವಾಗಲಿ ಕೇರಳ ರಾಜ್ಯ ಸರ್ಕಾರವಾಗಲಿ ಏನು ಮಾಡಲಾಗದು ಎಂದು ಈ ಮೂಲಕ ಪ್ರತಿಕ್ರಿಯಿಸುತ್ತೇನೆ.ಎಂದು ನಗರ ಪಂಚಾಯತ್ ವಮಾಹಿ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home Uncategorized ಅಡಿಕೆ ಬೆಳೆಗಾರರ ಸಂಕಷ್ಟ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಬದಲು ರಾಜ್ಯ ಸರ್ಕಾರಕ್ಕೆ ಮನವಿ...