ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ , ಜ್ಯೋತಿ ಸ್ತ್ರೀಶಕ್ತಿ ಗೊಂಚಲು ಸಂಘ ದೇವಚಳ್ಳ ಇದರ ಸಹಯೋಗದಿಂದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವು ದೇವಚಳ್ಳ ಗ್ರಾ.ಪಂ. ಸಭಾಭವನದಲ್ಲಿ ಸೆ.6ರಂದು ನಡೆಯಿತು. ಅಧ್ಯಕ್ಷತೆಯನ್ನು ಪವಿತ್ರ ಎಸ್.ಎನ್ ಗೊಂಚಲಿನ ಅಧ್ಯಕ್ಷರು ವಹಿಸಿದ್ದರು. ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕುಮಾರಿ ಮೋನಿಷಾ ಸಮುದಾಯ ಆರೋಗ್ಯ ಅಧಿಕಾರಿಯವರು ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಿದರು. ಡಿಜಿಟಲ್ ಸಾಕ್ಷರತೆಯ ಕುರಿತು ಅರಿವು ಕೇಂದ್ರ ದೇವಚಳ್ಳ ಗ್ರಾಮ ಪಂಚಾಯಿತಿನ ಗ್ರಂಥಾಲಯ ಮೇಲ್ವಿಚಾರಕಿಯಾದ ಶ್ರೀಮತಿ ಪ್ರಫುಲ್ಲ ರವರು ಮಾಹಿತಿ ನೀಡಿದರು. ಲಿಂಗತ್ವದ ಬಗ್ಗೆ ಶ್ರೀಮತಿ ಪ್ರೇಮ ಕಲ್ಲುಪಣೆ ಅವರು ಮಾಹಿತಿ ನೀಡಿದರು.
ಗುಂಪಿನ ಸದಸ್ಯರುಗಳು 21 ಬಗೆಯ ಪೌಷ್ಟಿಕ ಆಹಾರ ತಯಾರಿಸಿ ಪ್ರಾತ್ಯಕ್ಷತೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳಾ ಮೇಲ್ವಿಚಾರಕಿಯಾದ ಶ್ರೀಮತಿ ರವಿಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸೇವಾಜೆ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ರೇಣುಕಾ ಸ್ವಾಗತಿಸಿದರು. ನಿರೂಪಣೆಯನ್ನು ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಮತಿ ಪ್ರಫುಲ್ಲ ನಿರ್ವಹಿಸಿದರು. ವಂದನಾರ್ಪಣೆಯನ್ನು ಮಾಡಪ್ಪಾಡಿ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ವಿಮಲಾ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಒ, ಉಪಾಧ್ಯಕ್ಷರು, ಸದಸ್ಯರು, ಸಂಜೀವಿನಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘದ ಸದಸ್ಯರು, ಪೋಷಕರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.