ವಿದ್ಯತ್ ನ ನಿರಂತರ ಪೂರೈಕೆಗಾಗಿ 33/11ಕೆವಿ ಮೆಸ್ಕಾಂ ವಿದ್ಯುತ್ ಕೇಂದ್ರ ಸುಳ್ಯದಿಂದ 11ಕೆವಿ ಹೆಚ್.ಟಿ ಡೆಡಿಕೇಟೆಡ್ ಎಕ್ಸ್ ಪ್ರೆಸ್ ಫೀಡರ್ ಭೂಗತ ಕೇಬಲ್ ಮೂಲಕ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷ ಡಾ ಕೆ.ವಿ ಚಿದಾನಂದ ಸೆ 6 ರಂದು ಉದ್ಘಾಟಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಎಲುಬು ಮತ್ತು ಮೂಳೆ ತಜ್ಞ ಡಾ. ಸುಬ್ರಹ್ಮಣ್ಯ,
ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ.ಆರ್ ಭಟ್, ಧನಂಜಯ ಮದುವೆಗದ್ದೆ, ಎನ್.ಎಮ್.ಸಿ ಆಡಳಿತಾಧಿಕಾರಿ ಚಂದ್ರಶೇಕರ್ ಪೇರಾಲು, ಎಲೆಕ್ರ್ಟಿಕ್ ಎಂಜಿನಿಯರ್ ಸೊಮನಾಥ್ ಪೂಜಾರಿ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲರಾದ ಬಿ ಎಮ್ ಪ್ರೇಮ, ತಾಂತ್ರಿಕ ನಿರ್ದೇಶಕರಾದ ಹರಿಶ್ ಪ್ರಭು, ಗುತ್ತಿಗೆದಾರರಾದ ರತ್ನಗಿರಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ದೇವಸ್ಯ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.