ನಾಗರಿಕ ಸೇವಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಆಶ್ರಯದಲ್ಲಿ 41ನೇ ವರ್ಷದ ನಾಡಹಬ್ಬ ಗಣೇಶೋತ್ಸವ 2024 ಇಂದು ನಡೆಯಲಿದೆ. ಬೆಳಿಗ್ಗೆ ಗಣಪತಿ ಪ್ರತಿಷ್ಠೆ ಮತ್ತು ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ ಪ್ರಸಾದ ಭೋಜನ ನಡೆಯಲಿದೆ. ಸಂಜೆ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಬಾಳಿಲದಿಂದ ಬೊಮ್ಮನಮಜಲಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆದು ಮೂರ್ತಿ ವಿಸರ್ಜನೆ ನಡೆಯಲಿದೆ. ಮಧ್ಯಾಹ್ನ 12.00ರಿಂದ ಸಮಿತಿಯ ಅಧ್ಯಕ್ಷ ತಿಲಕ್ ತಂಟೆಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಪುತ್ತೂರಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ನಾಗೇ ಗೌಡ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲು, ಬೆಳ್ಳಾರೆಯ ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ ಭಾಗವಹಿಸಲಿದ್ದಾರೆ.
ಬಾಳಿಲದಲ್ಲಿ ಮಂಜುಶ್ರೀ ಹೋಟೆಲ್ ನಡೆಸುತ್ತಿರುವ ಪುಟ್ಟಣ್ಣ ಗೌಡರಿಗೆ ಗೌರವಾರ್ಪಣೆ ನಡೆಯಲಿದೆ. ಶುಭ ಅಭಿನಂದನೆಯನ್ನು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಿರಣ್ ಯು ಮಾಡಲಿದ್ದಾರೆ. ಬೆಳಿಗ್ಗೆ 9:00 ರಿಂದ ಸಾರ್ವಜನಿಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ,
ಪುರುಷರಿಗೆ ಮುಕ್ತ ಮತ್ತು 45 ಕೆಜಿ ವಿಭಾಗದ ಕಬ್ಬಡಿ ಪಂದ್ಯಾಟ, ಅಂಗನವಾಡಿ ಮಕ್ಕಳಿಗೆ, 1ರಿಂದ 4ನೇ ತರಗತಿ ಮಕ್ಕಳಿಗೆ 5 ರಿಂದ 7ನೇ ತರಗತಿ ಮಕ್ಕಳಿಗೆ 8ರಿಂದ ಪದವಿ ಪೂರ್ವ ತರಗತಿವರೆಗಿನ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 9.30ರಿಂದ ಗೀತ ಜ್ಞಾನ ಯಜ್ಞ ಘಟಕ ಬಾಳಿಲ ಇವರಿಂದ ಭಗವದ್ಗೀತೆ ಪಾರಾಯಣ, 10.30ರಿಂದ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಾಳಿಲ-ಮುಪ್ಪೇರ್ಯ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 6.30 ರಿಂದ ಕಲಾ ಮಂದಿರ್ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ.