ಹಳೆಗೇಟು: ಸಾಂಸ್ಕೃತಿಕ ಸಂಘದ ವತಿಯಿಂದ 41 ನೇ ವರ್ಷದ ಶ್ರೀ ಗಣೇಶೋತ್ಸವ

0

ಶ್ರೀ ಗಣಪತಿ ಪ್ರತಿಷ್ಠಾಪನೆ

ಹಳಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ಸೆ 7 ರಂದು ಗಣೇಶ್ ಚತುರ್ಥಿ ಪ್ರಯುಕ್ತ 41 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಗಣೇಶನ ಪ್ರತಿಷ್ಠಾಪನೆ ನಡೆಯಿತು.
ಪುರೋಹಿತ ನಟರಾಜ್ ಹಳೆಗೇಟು ರವರು ಪೂಜಾ ಕಾರ್ಯಕ್ರಮವನ್ನು ನಡೆಸಿದರು.

ಬೆಳಿಗ್ಗೆ 7-00ಕ್ಕೆ ಸ್ಥಳ ಶುದ್ದಿಕರಣ ನಡೆದು ಗಣಪತಿ ಹೋಮ ನಡೆಯಿತು.ಬಳಿಕ 8 ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ ನೆರವೇಯಿತು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಹಳೆಗೇಟು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಿ ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕಾರ್ಯದರ್ಶಿ ಶಿವನಾಥ್ ರಾವ್ ಹಳೆಗೇಟು,ಉಪ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕೋಶಾಧಿಕಾರಿ ಚಿತ್ತರಂಜನ್, ಕಾರ್ಯಕ್ರಮದ ಸಂಚಾಲಕರು ಜ್ಞಾನೇಶ್ವರ್ ಶೇಟ್,ದಿವಾಕರ ತಿಮ್ಸನ್, ರಾಮಕೃಷ್ಣ ಆಳಂಗಲ್ಯ,ಗೌತಮ್ ಭಟ್, ಸಚಿನ್ ರಾವ್,ಧನಂಜಯ ಪಂಡಿತ್,ಕಿಶನ್ ಕುಮಾರ್, ಗಣೇಶ್ ಕೊಯಿಂಗೋಡಿ,ಶ್ರೀಜಿತ್, ವಿಜಯ್ ಕುಮಾರ್, ಕಮಲಾಕ್ಷ ಆಚಾರ್ಯ,ನವೀನ್ ರಾವ್,ರಾಧಾ ಕೃಷ್ಣ ರಾವ್,ಧಿನೇಶ್ ಬೆಟ್ಟಂಪ್ಪಾಡಿ, ಜನಾರ್ಧನ ಬೆಟ್ಟಂಪ್ಪಾಡಿ,ಭುವನೇದ್ರ ಶೇಟ್,ಶಿವ ಕುಮಾರ್ ಬೆಟ್ಟಂಪ್ಪಾಡಿ,ಗಣೇಶ್ ಬೆಟ್ಟಂಪ್ಪಾಡಿ,ಸುನಿಲ್ ಮಾಣಿ ಬೆಟ್ಟು, ಹಾಗೂ ಹಳೆಗೇಟು ಶಿವಾಜಿ ಯುವ ವೃಂರದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಸಂಜೆ ಗಂಟೆ 6ಕ್ಕೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು,ರಾತ್ರಿ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ಸವಿತಾ ಕಿರಣ ಇವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರಗು ನಡೆಯಲಿದೆ.

ಸೆ 8 ಬೆಳಿಗ್ಗೆ 8 ಕ್ಕೆ ಪೂಜೆ ಮಧ್ಯಾನ 1 ಗಂಟೆಗೆ ಮಹಾಪೂಜೆ, ಸಂಜೆ ಗಂಟೆ 6 ರಿಂದ ಗಜಾನನ ಭಜನಾ ಸಂಘ ಜಯನಗರ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7-30ಕ್ಕೆ ಸಂಗೀತ ರಸಮಂಜರಿ – ಸೌಂಡ್ ಆಫ್ ಮೆಲೋಡಿ-ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ ಭಕ್ತಿ ಭಾವ ಹಾಗೂ ಚಿತ್ರಗೀತೆಗಳ ಸಂಗಮ ನಡೆಯಲಿದೆ.ರಾತ್ರಿ ಗಂಟೆ 10-00ಕ್ಕೆ ಮಹಾಪೂಜೆ ನಡೆಯಲಿದೆ.

ಸೆ 9 ರಂದು ಬೆಳಿಗ್ಗೆ ಗಂಟೆ 8-00ಕ್ಕೆ : ಪೂಜೆ, ಅ.ಗಂಟೆ 12-30ಕ್ಕೆ ಮಹಾಪೂಜೆ, ಅ.ಗಂಟೆ 1-00ಕ್ಕೆ : ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ ಗಂಟೆ 5 ರಿಂದ ವೈಭವದ ಶೋಭಾಯಾತ್ರೆ ಆರಂಭ ಗೊಳ್ಳಲಿದೆ.