ಕ್ರೈಸ್ತ ಅಲ್ಪಸಂಖ್ಯಾತರ ವಿವಿದ್ದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ.1 ರಂದು ಸುಳ್ಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.
2023-24ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿರುತ್ತದೆ.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೆ.12% ಡಿವಿಡೆಂಟ್ ನೀಡುವುದೆಂದು ತೀರ್ಮಾನಿಸಲಾಯಿತು.
ಗುತ್ತಿಗಾರು ಚರ್ಚ್ ನ ಧರ್ಮಗುರುಗಳಾದ ರೆ.ಪಾ ಆದರ್ಶ ಜೊಸೆಫ್, ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿ ನಿರ್ದೇಶಕ ಕೆ.ಪಿ ಜಾನಿ, ಚಾಕೋ ಫಿಲಿಪ್ ರವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ರೋಯನ್ ಪ್ರಿನ್ಸನ್ ರವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಸಭೆಯಲ್ಲಿ ವರದಿಯನ್ನು ಸುನಿತಾ ಎಂ ಡಿಸೋಜ ಮಂಡಿಸಿದರು.
ಲೆಕ್ಕ ಪತ್ರ ಮಂಡನೆಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಪಿ.ಜಿ ಮಾಡಿದರು.
ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ ಸ್ವಾಗತಿಸಿ, ನಿರ್ದೇಶಕ ಲೀಜೊ ಜೊಸ್ ವಂದಿಸಿದರು.
ಸಭೆಯಲ್ಲಿ ಸಂಘದ ಸಿಬ್ಬಂದಿಗಳು,ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.