ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ನಾಳೆ ಅಪರಾಹ್ನ ಗಣೇಶನ ಶೋಭಾಯಾತ್ರೆ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸೆ.7 ರಂದು 21 ನೇ ವರ್ಷದ ಶ್ರೀಗಣೇಶೋತ್ಸವ ನಡೆಯಲಿದ್ದು ಇಂದು ಬೆಳಗ್ಗೆ ಗಣಪತಿ ಪ್ರತಿಷ್ಠೆ ನಡೆಯಿತು.
ಬಳಿಕ ಸಾಮೂಹಿಕ ಗಣಪತಿ ಹವನ,ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವುದು ಕಾರ್ಯಕ್ರಮ ಜರುಗಿದವು.

ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ,
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಮತ್ತು ಎಲ್. ಕೆ. ಜಿ ಯು. ಕೆ. ಜಿ ಮಕ್ಕಳಿಗೆ, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೀಗೆ ವಿವಿಧ ಸ್ಥರಗಳ ಸ್ಪರ್ಧೆಗಳು ಜರಗಿತು.
ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ ಹಾಗೂ
ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ
ಭಜನಾ ಕಾರ್ಯಕ್ರಮ ಜರುಗಲಿದೆ. ಬಳಿಕ
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನಡೆಯಲಿದೆ.
ರಾತ್ರಿ ಸಭಾ ಕಾರ್ಯಕ್ರಮ,
ಧಾರ್ಮಿಕ ಉಪನ್ಯಾಸದ ಬಳಿಕ,
“ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ. ಸೆ.8 ರಂದು ಅಪರಾಹ್ನ ಗಣೇಶನ ಶೋಭಾಯಾತ್ರೆ ನಡೆಯಲಿದೆ.

ಸಾರ್ವಜನಿಕ ಮುಕ್ತ ಕ್ರೀಡಾಕೂಟ

ಇಂದು ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು. ಸೆ.
8 ರಂದು ಪುರುಷರ ಮುಕ್ತ ಹಗ್ಗ-ಜಗ್ಗಾಟ ನಡೆಯಲಿದೆ.