ಭಜರಂಗದಳ ಕಾರ್ಯಕರ್ತರಿಂದ ದಫನ
ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಕಳೆದ ಸೆ.2ರಂದು ಕಾರು ಢಿಕ್ಕಿ ಹೊಡೆದು ಕಾಲಿಗೆ ಗಂಭೀರವಾಗಿ ಗಾಯಗೊಂಡು ನಡೆದಾಡಲು ಆಗದ ಸ್ಥಿತಿಯಲ್ಲಿದ್ದ ಹೋರಿ ಸೆ.8ರಂದು ಮಧ್ಯಾಹ್ನ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿ ಗೂನಡ್ಕದ ರಸ್ತೆ ಬದಿ ಮಲಗಿತ್ತು. ಸ್ಥಳೀಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳೀಯರು ಸೇರಿ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಆರೈಕೆ ಮಾಡಿದ್ದರು.
ಸೆ.5ರಂದು ಸುಳ್ಯದ ಭಜರಂಗದಳದ ಯುವಕರು ಗೂನಡ್ಕಕ್ಕೆ ತೆರಳಿ ಪಿಕಪ್ ವಾಹನದಲ್ಲಿ ಹೋರಿಯನ್ನು ಸುಳ್ಯದ ಪಶುಚಿಕಿತ್ಸಾಲಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು.
ಬಳಿಕ ಕಾಂತಮಂಗಲದಲ್ಲಿ ಭಜರಂಗದಳದ ಸಂಚಾಲಕ ವರ್ಷಿತ್ ಚೊಕ್ಕಾಡಿ ಅವರ ಮನೆಯ ಬಳಿ ತಾತ್ಕಾಲಿಕ ಹಟ್ಟಿ ನಿರ್ಮಾಣ ಮಾಡಿ ಕಟ್ಟಿ ಆರೈಕೆ ಮಾಡಲಾಗಿತ್ತು. ಅಲ್ಲಿ ಸೆ.8ರಂದು ಮಧ್ಯಾಹ್ನ ಹೋರಿ ಮೃತಪಟ್ಟಿದೆ.
ಬಳಿಕ ಸುಳ್ಯ ನಗರದ ಭಜರಂಗದಳದ ಕಾರ್ಯಕರ್ತರು ಸೇರಿ ಗುಂಡಿ ತೆಗೆದು ದಫನ ಮಾಡಿದ್ದರು. ಈ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.