ದಿವಂಗತ ಗಿರಿಜಾ ದಬ್ಬಡ್ಕ ಕಲ್ಮಕಾರು ಇವರ ಉತ್ತರ ಕ್ರೀಯಾಧಿ ಸದ್ಗತಿ ಕಾರ್ಯಕ್ರಮ ಸೆ.10 ರಂದು ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಆರಂಭದಲ್ಲಿ ಭವಾನಿಶಂಕರ ಪಿಂಡಿಮನೆ ಅವರು ದೀಪ ಬೆಳಗಿಸಿದರು. ಮೃತರ ಬಗ್ಗೆ ಸತೀಶ್ ಕೂಜುಗೋಡು ನುಡಿನಮನ ಸಲ್ಲಿಸಿ ಮಾತನಾಡುತ್ತಾ ಗಿರಿಜಾ ಅವರು ಬದುಕಿನಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಆದರೆ ಅವರೊಬ್ನ ಧೀರ ಮಹಿಳೆ ಅವರು. ಗಿರಿಜಾ ಅವರು ಅಪಾರ ದೈವ ಭಕ್ತರಾಗಿದ್ದು ಯಾರಿಗೂ ತೊಂದರೆ ಕೊಡದೆ ಮರಣ ಕೊಡಿ ಎಂದು ಭೇಡಿದವರು . ಕುಟುಂಬಸ್ಥರಿಗೆ ಭೂಮಿಯನ್ನು ಕನಿಷ್ಠ ಧರಕ್ಕ ಮಾರಿ, ಬಡ ಮಂದಿಗೆ ಭೂಧಾನ ಮಾಡಿ ಮೇಲ್ಪಗ್ತಿ ಹಾಕಿದವರು. ಭಗವಂತನಲ್ಲಿ ಲೀನವಾದ ಆತ್ಮ ಪ್ರಕಾಶ ಮಾನವಾಗಲಿ ಎಂದು ನುಡಿದರು.
ನುಡಿನಮನದ
ಬಳಿಕ ಸೇರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭ ಪುತ್ರಿ ಶ್ರೀಮತಿ ವಿಜಯ ಶಿವರಾಮ ಕಜ್ಜೋಡಿ, ಅಳಿಯದಿರಾದ ಬಾಲಭಾಸ್ಕರ ಕನ್ನಡ್ಕ ಮನೆ, ಶಿವರಾಮ ಕಜ್ಜೋಡಿ, ದಬ್ಬಡ್ಕ ಮನೆತನದವರು, ಬಂಧುಗಳು ಉಪಸ್ಥಿತರಿದ್ದರು.