ಅಮರಮೂಡ್ನೂರು: ಶೇಣಿ ಮಾಳಿಗೆ ಎಂಬಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆ

0

2023-24ನೇ ಸಾಲಿನ 15ನೇ ಹಣಕಾಸಿನ ಅನುದಾನದಲ್ಲಿ ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಮಾಳಿಗೆ ಎಂಬಲ್ಲಿ ಹಾಗೂ ಶೇಣಿ ಬಸ್ ತಂಗುದಾಣ ಬಳಿ ಸೋಲಾರ್ ಲೈಟ್ ಅಳವಡಿಸಲಾಯಿತು.


ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು,ಚೊಕ್ಕಾಡಿ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಅನಿಲ್ ಪೂಜಾರಿಮನೆ,ಕೆ ಬಿ ನಾಯ್ಕ ಪೋನಡ್ಕ, ನಿರ್ಮಲಾ ರೈ, ಶೇಣಿ ಬಾಲಕ್ರಷ್ಣ ರೈ, ಜಯರಾಮ ಶೆಟ್ಟಿ ಹೊಸ ಮಜಲು, ಸಂದೀಪ್ ಪೋನಡ್ಕ, ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.