ಬೊಳುಬೈಲು:ಪೀಸ್ ಸ್ಕೂಲ್ ನಲ್ಲಿ ಮಕ್ಕಳ ಜಾಗೃತಿ ಕುರಿತು ಪೋಷಕರಿಗೆ ಮಾಹಿತಿ ಕಾರ್ಯಾಗಾರ

0

ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ ಮಕ್ಕಳ ಪೋಷಣೆ ಮತ್ತು ಆಧುನಿಕ ಸವಾಲುಗಳು ಎಂಬ ವಿಷಯದ ಕುರಿತು ಪೋಷಕರಿಗೆ ಮಾಹಿತಿ ಕಾರ್ಯಾಗಾರ ಸೆ 11ರಂದು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕೇರಳದ ಕೋಝಿಕ್ಕೋಡಿನ ಹೆಸರಾಂತ ವಾಗ್ಮಿ, ಕೌಶಲ್ಯಾಭಿವೃದ್ಧಿ ತರಬೇತುದಾರ ಹಾಗೂ ಫಾರೂಕ್ ಟ್ರೇನಿಂಗ್ ಕಾಲೇಜ್ ನ ಸಹಾಯಕ ಪ್ರಾಧ್ಯಾಪಕರಾದ ಡಾ.ಜೌಹರ್ ಮುನವ್ವಿರ್ ರವರು ಪೋಷಕರಿಗೆ ಮಕ್ಕಳ ಪೋಷಣೆ ಮತ್ತು ಆಧುನಿಕ ಸವಾಲುಗಳು ಎಂಬ ವಿಷಯದಲ್ಲಿ ಮಾಹಿತಿ ನೀಡಿ ‘ಸವಾಲುಗಳ ಈ ಕಾಲದಲ್ಲಿ ಮಕ್ಕಳನ್ನು ಮೌಲ್ಯಧಾರಿತವಾಗಿ ಬೆಳೆಸುವ ಬಗ್ಗೆ, ಮಕ್ಕಳಿಗೆ ಸರಿಯಾದ ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಮಕ್ಕಳ ಮನೋಬಲವನ್ನು ಹೆಚ್ಚಿಸುವ ಬಗ್ಗೆ ಹಾಗೂ ಪ್ರೋತ್ಸಾಹವನ್ನು ನೀಡುವ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ, ಕರ್ನಾಟಕ ಟೆಕ್ಸಾಡೋ ಬೆಂಗಳೂರು ನಡೆಸಿದ ಕಲರ್ ಬೆಲ್ಟ್ ಪ್ರೊಮೋಷನ್ ಟೆಸ್ಟಿನಲ್ಲಿ ಎಲ್ಲೋ ಬೆಲ್ಟ್ ಪಡೆದ ಶಾಲೆಯ ಸುಮಾರು 20 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸುದ್ದಿ ಬಿಡುಗಡೆ ಮತ್ತು ಶರ ಪ್ರಕಾಶನದ ಆಶ್ರಯದಲ್ಲಿ ನಡೆದ ದೇಶಭಕ್ತಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಾರು ಹದಿಮೂರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಗಾರದ ಅಧ್ಯಕ್ಷತೆಯನ್ನು ಸುಳ್ಯ ಬೊಳುಬೈಲು ತೌಹೀದ್ ಎಜುಕೇಶನಲ್ ಮತ್ತು ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಕೆ ಅಬೂಬಕ್ಕರ್ ವಹಿಸಿದ್ದರು.

ಶಾಲಾ ಅರಬಿಕ್ ಶಿಕ್ಷಕ ಹಸೈನಾರ್ ಸ್ವಲಾಯಿ ರವರು ಶಾಲಾ ಅಸೆಂಬ್ಲಿಯಲ್ಲಿ ಮಂಡಿಸುವ ಈ ವರ್ಷದ ಹಧೀಸನ್ನು ಮಂಡಿಸಿ ಅದರ ಉದ್ಘಾಟನೆಯನ್ನು ಮಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತೌಹೀದ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಫೌಂಡೇಶನ್ ಇದರ ಉಪಾಧ್ಯಕ್ಷ ಸಂಶುದ್ದೀನ್, ಉದ್ಯಮಿ ಅಬ್ದುಲ್ಲಾ ಪಿ ಎಂ ಸುಳ್ಯ ಕಾರ್ಸ್, ಪೀಸ್ ಸ್ಕೂಲ್ ಮುಖ್ಯೋಪಾಧ್ಯಾಯ ಮಹಮ್ಮದ್ ಸೈಫುಲ್ಲಾ,ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ, ಪೋಷಕರಾದ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮಹಮ್ಮದ್ ಸೈಫುಲ್ಲಾ ರವರು ಸ್ವಾಗತಿಸಿ ಶಿಕ್ಷಕಿಯರಾದ ರಾಹಿಲಾ ಹಾಗೂ ಮುಹ್ಸಿನಾ ಕಾರ್ಯಕ್ರಮ ನಿರೂಪಿಸಿ ತಾಹಿರಾ ವಂದಿಸಿದರು.
ಮದ್ಯಾಹ್ನದ ಬಳಿಕ ಶಾಲಾ ಶಿಕ್ಷಕರಿಗೆ ತರಬೇತಿ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಆಡಳಿತ ಸಮಿತಿ ಸದಸ್ಯರು, ಪೋಷಕರುಗಳು ಭಾಗವಹಿಸಿದ್ದರು.