ಸೆ.18: ಕೊಲ್ಲಮೊಗ್ರ ಹರಿಹರ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಸಭೆ

0

ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯು ಸೆ.18 ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರ ಹರಿಹರಪಲ್ಲತ್ತಡ್ಕದಲ್ಲಿ ನಡೆಯಲಿದೆ.

ಆ ಪ್ರಯುಕ್ತ ಸಂಘದ ಕಾರ್ಯವ್ಯಾಪ್ತಿಯ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ಗ್ರಾಮದ ಸೊಸೈಟಿ ಸದಸ್ಯರುಗಳ ಮಕ್ಕಳಿಗೆ 2023 ರ ಸಾಲಿನಲ್ಲಿ ಮತ್ತು 2024ರ ಸಾಲಿನಲ್ಲಿ, ಎಸ್. ಎಸ್.ಎಲ್.ಸಿ.ಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ವಿದ್ಯಾನಿಧಿ ನೀಡಲಿದ್ದು, ಅರ್ಹರು ಸೆ.17 ರ ಒಳಗಾಗಿ ಅಂಕ ಪಟ್ಟಿಯ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ ಸಮೇತ ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸಂಪರ್ಕಿಸುವಂತೆ ಕೋರಲಾಗಿದೆ.