ಸೆ.16 ರಂದು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಬಿ.ಪಿ.ಸಿಂಗ್ ರಾವತ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರ ತರಲು ಮುಂದಾದ ಯು.ಪಿ.ಎಸ್ ಯೋಜನೆಯನ್ನು ಕರ್ನಾಟಕ ರಾಜ್ಯ ಎನ್.ಪಿ.ಎಸ್ ನೌಕರರ ಸಂಘ ವಿರೋಧಿಸುತ್ತದೆ. ಸೆ.16 ರ ಸೋಮವಾರದಂದು ದೆಹಲಿಯಲ್ಲಿ ನ್ಯಾಷನಲ್ ಓಲ್ಡ್ ಪೆನ್ನನ್ ರೀಸ್ಟೋರ್ ಯುನೈಟೆಡ್ ಫ್ರಂಟ್ (NOPRUF) ಎನ್.ಪಿ.ಎಸ್ ರದ್ದತಿಗೆ ದೇಶಾಧ್ಯಂತ ಹಲವಾರು ಹೋರಾಟಗಳನ್ನು ಮಾಡಿರುವ ಈ ಸಂಘಟನೆ ಇದೀಗ ರಾಷ್ಟ್ರ ಮಟ್ಟದ ಸಭೆ ಕರೆದು ಮುಂದಿನ ಹೋರಾಟದ ರೂಪರೇಷ ಸಿದ್ದಪಡಿಸಲು ಚಿಂತನೆ ನಡೆಸಿದೆ. ಸೆ.16 ರ ಸೋಮವಾರದಂದು ನವದೆಹಲಿಯಲ್ಲಿ ಪೂರ್ವಭವಿ ಸಭೆ ನಡೆಯಲಿದೆ. ಕರ್ನಾಟಕ ರಾಜ್ಯದಿಂದ ರಾಜ್ಯಾಧ್ಯಕ್ಷರಾದ ನಾಗನಗೌಡ.ಎಂ.ಎ. ಗೌರವಾಧ್ಯಕ್ಷರಾದ ರಮೇಶ ಸಂಗಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ.ಆರ್.ಎ ಉಪಾಧ್ಯಕ್ಷರುಗಳಾದ ನಾರಾಯಣಸ್ವಾಮಿ ಹಾಗೂ ಪೃಥ್ವಿಕುಮಾರ ಭಾಗವಹಿಸಲಿದ್ದಾರೆ. ಎಂದು ರಾಜ್ಯಾದ್ಯಕ್ಷರಾದ ನಾಗನಗೌಡ.ಎಂ.ಎ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿಯವರ ನೇತೃತ್ವದಲ್ಲಿ ನಡೆದ ನಮ್ಮಭಿಮಾನದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎನ್.ಪಿ.ಎಸ್ ರದ್ದತಿಗೆ 5 ಜನ ಐ.ಎ.ಎಸ್ ಅಧಿಕಾರಿಗಳ ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದಾರೆ. ವರದಿ ಬಂದ ತಕ್ಷಣ ಓ.ಪಿ.ಎಸ್ ಜಾರಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಒಂದು ವೇಳೆ ಓ.ಪಿ.ಎಸ್ ಜಾರಿಯಲ್ಲಿ ವಿಳಂವಾದರೆ ಸಂಘಟನೆ ಗಟ್ಟಿ ನಿರ್ದಾರ ಮಾಡಲಿದೆ ಎಂದು ಎನ್.ಪಿ. ನೌಕರರ ಸಂಘದ ರಾಜ್ಯಾಧ್ಯಕ್ಷರಾದ ನಾಗನಗೌಡ ಎಂ.ಎ. ತಿಳಿಸಿದ್ದಾರೆ