ಸ್ಥಗಿತವಾಗಿದ್ದ ಘನ ವಾಹನ ಸಂಚಾರ ಮರು ಆರಂಭ
ಕೊಲ್ಲಮೊಗ್ರು – ಕಲ್ಮಕಾರು ಪಿ.ಡಬ್ಲ್ಯೂ.ಡಿ ರಸ್ತೆಯ ಗಡಿಕಲ್ಲು ಎಂಬಲ್ಲಿ ಮುಖ್ಯ ರಸ್ತೆಯ ಹೊಳೆ ಬದಿ ಬರೆ ಕುಸಿದು ಬಿದ್ದಿದ್ದು ಕಲ್ಮಕಾರಿಗೆ ಸ್ಥಗಿತಗೊಂಡಿದ್ದ ಘನ ವಾಹನ ಸಂಚಾರ ಮರು ಆರಂಭವಾಗಿದ್ದು ಬಸ್ ಸಂಚಾರ ವ್ಯವಸ್ಥೆಯೂ ಆರಂಭವಾಗಿದೆ.
ಇದಲ್ಲದೆ ತಾತ್ಕಾಲಿಕವಾಗಿ ತಡೆಗೋಡೆ ಕಾಮಗಾರಿ ಆರಂಭಗೊಂಡಿದೆ. ರಸ್ತೆಯ ಮತ್ತೊಂದು ಬದಿಗೆ ಮರಳು ತುಂಬಿ ರಸ್ತೆ ಅಗಲಗೊಳಿಸಲಾಗಿದ್ದು ಘನ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆ.9 ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ಮಾಡಿದ್ದು ಶಾಶ್ವತ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.