ಆಲೆಟ್ಟಿ ಗ್ರಾಮದ ಪರಿವಾರಕಾನ ಮಧುವನ ದಿ.ಶಂಕರ ನಂಬಿಯಾರ್ ರವರ ಪತ್ನಿ ಶ್ರೀಮತಿ ಸೌಧಾಮಿನಿ ಟೀಚರ್ ಅಲ್ಪಕಾಲದ ಅಸೌಖ್ಯದಿಂದ ಇಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಶ್ರೀಮತಿ ಶ್ರೀದೇವಿ ರಾಜೇಂದ್ರ, ಆಲೆಟ್ಟಿ ಸೊಸೈಟಿ ಉದ್ಯೋಗಿ ಶ್ರೀಮತಿ ಶಕುಂತಲಾ ಕೃಷ್ಣನ್ , ಶ್ರೀಮತಿ ವಾಣಿ ರಮೇಶ್ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಸೌದಾಮಿನಿಯವರು ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.