ದರ್ಖಾಸ್ತು ಶಾಲಾ ಶಿಕ್ಷಕಿ ಪ್ರೇಮಾರವರಿಗೆ ನೇಶನ್ ಬಿಲ್ಡರ್ ಅವಾರ್ಡ್

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರೇಮಾರವರಿಗೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ನೇಶನ್ ಬಿಲ್ಡರ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.


2024 – 25 ನೇ ಸಾಲಿನಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಬಜನಿ,ಸಹಾಯಕ ಗವರ್ನರ್ ರೊ.ವಿನಯ ಕುಮಾರ್,ಕಾರ್ಯದರ್ಶಿ ರೊ.ಎ.ಕೆ.ಮಣಿಯಾಣಿ,ರೊ.ರವೀಂದ್ರ ಮರಕಡ, ರೊ.ಶಶಿಧರ್ , ರೊ.ಆರೀಫ್, ರೊ.ಕೇಶವಮೂರ್ತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.