ಪೈಜಾರು ಜಂಕ್ಷನ್ ಬಳಿ ಬೈಕ್ ಮತ್ತು ಸ್ಕೂಟಿ ಅಪಘಾತ

0

ಸವಾರರು ಅಪಾಯದಿಂದ ಪಾರು

ಪೈಚಾರು ಜಂಕ್ಷನ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ವಾಹನಗಳು ಜಖಂ ಆದ ಘಟನೆ ಇದೀಗ ಸಂಭವಿಸಿದೆ.

ಘಟನೆಯಿಂದ ಸವಾರರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸ್ಥಳದಲ್ಲಿ ನಿರಂತರವಾಗಿ ಅಪಘಾತ ಉಂಟಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.