ಮೇನಾಲದಲ್ಲಿ ಶಾಲಾ ಬಸ್ಸಿನ ಹಿಂಭಾಗಕ್ಕೆ ಗುದ್ದಿದ ಬೈಕ್ : ಸವಾರ ಅಪಾಯದಿಂದ ಪಾರು

0

ಮೇನಾಲ ಸಮೀಪ ಶಾಲಾ ಬಸ್ಸಿನ ಹಿಂಭಾಗಕ್ಕೆ ಬೈಕೊಂದು ಡಿಕ್ಕಿ ಹೊಡೆದಿದ್ದು ಸವಾರ ಅಪಾಯದಿಂದ ಪಾರಾದ ಘಟನೆ ಇದೀಗ ನಡೆದಿದೆ.
ಸುಳ್ಯದ ಖಾಸಗಿ ಶಾಲೆಯ ಬಸ್ಸು ಮೇನಾಲದತ್ತ ವಿದ್ಯಾರ್ಥಿಗಳನ್ನು ಬಿಡಲು ಹೋಗಿದ್ದ ವೇಳೆ ವಿದ್ಯಾರ್ಥಿಗಳನ್ನು ಇಳಿಸಲು ಬಸ್ಸು ನಿಲ್ಲುತ್ತಿದ್ದಂತೆ ಬಸ್ಸಿನ ಹಿಂಬದಿಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಸವಾರನಿಗೆ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.