ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಓಣಂ ಆಚರಣೆ

0

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಓಣಂ ಹಬ್ಬವನ್ನು ಸೆ.13ರಂದು ಆಚರಿಸಲಾಯಿತು. ಚಕ್ರವರ್ತಿ ಮಹಾಬಲಿಯನ್ನು ಚೆಂಡೆ ವಾದನದ ಮೂಲಕ ಸ್ವಾಗತಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷ ಡಾ ಕೆ.ವಿ ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿದರು.

ಎ.ಒ.ಎಲ್.ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್, ಡಾ. ಶೀಲಾ ಜಿ ನಾಯಕ್, ಕೆವಿಜಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಬಿ.ಎಮ್ ಪ್ರೇಮ, ಸಹ ಪ್ರಾಧ್ಯಾಪಕರಾದ ಡಾ ರಂಜಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಓಣಂ ವಿಶೇಷತೆಯಾಗಿ ಪೂಕಳಂ ಸ್ಪರ್ಧೆ ನಡೆಯಿತು.