ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೀಲಾರಿನ ಕೈಪಡ್ಕ ನಿವಾಸಿ ಕಲ್ಲುಕಟ್ಟುವ ಮೇಸ್ತ್ರಿಯಾಗಿದ್ದ ಚನಿಯ ನಾಯ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.14ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚನಿಯ ನಾಯ್ಕ ಅವರ ಆರೋಗ್ಯದಲ್ಲಿ ಹಠಾತ್ ವ್ಯತ್ಯಯವಾಗಿದ್ದರಿಂದ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪುತ್ರರಾದ ಜನಾರ್ಧನ, ಶ್ರೀಧರ, ಸುಧಾಕರ, ಜಯರಾಮ, ರಘು, ಪ್ರಭಾಕರ, ಕುಸುಮ, ಸೊಸೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.