ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಬಲರಾಮ ಜಯಂತಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಸೆ. 15ರಂದು ನಡೆಯಿತು. ತಾಲೂಕು ಸಂಘದ ಅಧ್ಯಕ್ಷ ಎನ್. ಜಿ. ಪ್ರಭಾಕರ ರೈ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.
ದೇಶಿ ತಳಿ ಗೋ ಸಾಕಣೆ ಹಾಗೂ ಗವ್ಯ ಉತ್ಪನ್ನಗಳ ಅನುಭವಿ ಮತ್ತು ಮಾಹಿತಿ ನೀಡಿದ ಜೋಗಿಯಡ್ಕ ಮಹಾಲಿಂಗೇಶ್ವರ ಭಟ್ ರವರನ್ನು ಸನ್ಮಾನಿಸಲಾಯಿತ್ತು. ಪ್ರಗತಿಪರ ಕೃಷಿಕರಾದ ಶ್ರೀಮತಿ ನಾಗವೇಣಿ ಕುಂಞಣ್ಣ ರೈ ಎಣ್ಮೂರು ಗುತ್ತುರವರನ್ನು ಶ್ರೀಮತಿ ಶುಭಮಂಗಲ ರಮೇಶ್ ಕೋಟೆಯವರು ಸನ್ಮಾನಿಸಿದರು.
ಡ್ರ್ಯಾಗನ್ ಫ್ರುಟ್ ಕೃಷಿ ಹಾಗು ಮಾರಾಟದ ಬಗ್ಗೆ ಕೆ.ಎಸ್.ಪ್ರಮೋದ್ ಕುಮಾರ್. ಬಿ ಯವರು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ವಿಯೆಟ್ನಾಂ ಮಾದರಿ ಕಾಳು ಮೆಣಸು ಕೃಷಿಯ ಬಗ್ಗೆ ಕರಾವಳಿ ಎಗ್ರೋ, ಬೆಳ್ತಂಗಡಿಯ ಉಜಿರೆ ಲಕ್ಷ್ಮಣ ಜಿ . ಎಸ್ ರವರು ಮಾಹಿತಿ ನೀಡಿದರು. ಇತ್ತೀಚೆಗೆ ನಿಧನ ಹೊಂದಿದ ಶ್ರೀಮತಿ ರತಿ ರೈ ಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ನಿಕಟ ಪೂರ್ವ ಕಾರ್ಯದರ್ಶಿ ನೆಟ್ಟಾರು ಗೋಪಾಲಕೃಷ್ಣ ಭಟ್ ಪ್ರಸ್ತಾವನೆ ಗೈದರು. ತ್ರಿಷಾ ಮತ್ತು ರಾಜೇಶ್ವರಿ ರೈಯವರು ಪ್ರಾರ್ಥಿಸಿದರು.
ಕಾರ್ಯದರ್ಶಿ ಸಾಯಿಶೇಖರ ಸ್ವಾಗತಿಸಿ ಸಭೆ ನಡಾವಳಿ ನಡೆಸಿ ಕೊಟ್ಟರು. ಕೋಶಧಿಕಾರಿ ಸೀತಾರಾಮ ಕಂಜಿರಕಾರ ಮೂಲೆಯವರು ಸನ್ಮಾನ ಪತ್ರ ವಾಚಿಸಿದರು. ರಮೇಶ್ ಕೋಟೆ ವಂದಿಸಿದರು.
ವರದಿ : ಸಂಕಪ್ಪ ಸಾಲ್ಯಾನ್