ಮಂಗಳೂರಿನ ಕುಳಾಯಿಯಲ್ಲಿ ಧನ್ಯಾ ಬಾಳೆಕಜೆ ಮಾಲಕತ್ವದ ತಪಸ್ಯಾ ವುಮೆನ್ ಎಕ್ಸ್ ಕ್ಲೂಸಿವ್ ಮಳಿಗೆ ಶುಭಾರಂಭ

0

ಪತ್ರಕರ್ತೆಯಾಗಿದ್ದ ಧನ್ಯಾ ಬಾಳೆಕಜೆಯವರ ಮಾಲಕತ್ವದ ತಪಸ್ಯಾ ವುಮೆನ್ ಎಕ್ಸ್ ಕ್ಲೂಸಿವ್ ಮಳಿಗೆ ಮಂಗಳೂರಿನ ಕುಳಾಯಿಯ ಗ್ರೀನ್ ಪಿಚ್ ರೋಡ್‌ನಲ್ಲಿ ಶುಭಾರಂಭಗೊಂಡಿದೆ.

ಇಲ್ಲಿ ಮಹಿಳೆಯರ ಬ್ರಾಂಡೆಡ್ ಒಳ ಉಡುಪುಗಳು, ಮಹಿಳೆಯರ, ಮಕ್ಕಳ ವಸ್ತ್ರಗಳು, ಫ್ಯಾನ್ಸಿ ಐಟಂಗಳು, ಜೆರಾಕ್ಸ್, ಫೋಟೋ ಪ್ರಿಂಟ್, ಟೈಪಿಂಗ್, ಇಮೈಲ್ ಸರ್ವಿಸ್, ಶುಭ ಸಮಾರಂಭಗಳಿಗೆ ಡಿಜಿಟಲ್ ಇನ್ವಿಟೇಶನ್ ಕಾರ್ಡ್, ಬಿಸಿನೆಸ್ ಪ್ಲಯರ್, ಬ್ಯಾನರ್ ಡಿಸೈನ್, ಡಿಜಿಟಲ್ ಐಡಿ ಕಾರ್ಡ್, ಎಲ್ಲಾ ರೀತಿಯ ಆಡಿಯೋ, ವೀಡಿಯೋಗಳಿಗೆ ವಾಯ್ಸ್ ಓವರ್, ಕಾರ್ಯಕ್ರಮಗಳ ನಿರೂಪಣೆ ಸೇವೆಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಎಲ್ಲಾ ರೀತಿಯ ಫಂಕ್ಷನ್‌ಗಳಿಗೆ ಬೇಕಾದ ಬ್ರೈಡಲ್ ಆಭರರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮಾಲಕಿ ಧನ್ಯಾ ಬಾಳೆಕಜೆ ತಿಳಿಸಿದ್ದಾರೆ.

ಧನ್ಯಾ ಬಾಳೆಕಜೆಯವರು ತೊಡಿಕಾನ ಗ್ರಾಮದ ಜನಾರ್ದನ ಬಾಳೆಕಜೆ ಮತ್ತು ಚಂದ್ರಕಲಾ ದಂಪತಿಯ ಪುತ್ರಿ.


ಉಬರಡ್ಕದ ಭರತ್ ನಾರ್ಕೋಡು ಅವರನ್ನು ವಿವಾಹವಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ.