ಕೊಯನಾಡು ಸುನ್ನಿ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

0

ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗ ಜಾಥಾ ನಡೆದು ಜಿಲ್ಲಾ ವಕ್ಫ್ ಮಾಜಿ ಸದಸ್ಯ ಮೊಯಿದಿನ್ ಕುಂಞ ರವರು ಮುಖಂಡರಾದ ಹನೀಫ್ ಎಸ್ ಪಿ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ ನೀಡಲಾಯಿತು.

ಮಸೀದಿಯಿಂದ ಚೆಡಾವು ವರೆಗೂ ಬೃಹತ್ ಜಾಥಾ ನಡೆಯಿತು.ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಧಫ್ ಹಾಗೂ ವಿಧ್ಯಾರ್ಥಿಗಳಿಂದ ಮಿಲಾದ್ ಘೋಷಣೆ ಮೂಲಕ ಸಾಗಿ ಬಂತು.

ಜಾಥಾದಲ್ಲಿ ಊರಿನವರು, ಪೋಷಕರು,ಯುವಕರು, ಸರ್ವ ಜಮಾಅತರು ಭಾಗವಹಿಸಿದ್ದರು, ರ್‍ ಜಮಾಅತ್ ನ ಸದಸ್ಯರಿಂದ ತಂಪು ಪಾನೀಯ ಸಿಹಿ ತಿಂಡಿ ವಿತರಿಸಲಾಯಿತು.