ಕಲ್ಲುಗುಂಡಿ : ರಿಕ್ಷಾ ಮತ್ತು ಕಾರು ಡಿಕ್ಕಿ ,ಸವಾರನಿಗೆ ಗಾಯ , ವಾಹನ ಜಖಂ

0

ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿಯಾಗಿ ರಿಕ್ಷಾ ಚಾಲಕನಿಗೆ ಗಾಯವಾದ ಘಟನೆ ಕಲ್ಲುಗುಂಡಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಸೆ 16 ರಂದು ರಾತ್ರಿ ನಡೆದಿದೆ.

ಸಂಪಾಜೆಯಿಂದ ಸುಳ್ಯಕ್ಕೆ ತೆರಳುವ ಕಾರು ಮತ್ತು ಕಲ್ಲುಗುಂಡಿಯಿಂದ ಸಂಪಾಜೆ ಕಡೆ ಹೋಗುವ ರಿಕ್ಷಾದ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕನಿಗೆ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ . ವಾಹನಗಳು ಜಖಂ ಗೊಂಡಿದೆ .