193 ಕೋಟಿ ವಾರ್ಷಿಕ ವ್ಯವಹಾರ 38. 47 ಲಕ್ಷ ನಿವ್ವಳ ಲಾಭ
ಶೇಕಡಾ 8 ಡಿವಿಡೆಂಡ್ ವಿತರಣೆ
ರಬ್ಬರ್ ಬೆಳೆಗಾರರಿಗೆ ಕೆಜಿಗೆ ಎರಡು ರೂ. ಪ್ರೋತ್ಸಾಹಧನ ನೀಡಲು ನಿರ್ಧಾರ
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಸೆ.17ರಂದು ಜರುಗಿತು.
ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಅವರು 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2023 – 24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 193 ಕೋಟಿ ವಾರ್ಷಿಕ ವ್ಯವಹಾರ ಮಾಡಿದ್ದು, 38,477,32,84 ಲಕ್ಷ ನಿವ್ವಳ ಲಾಭ ಪಡೆದಿದ್ದು, ಸದಸ್ಯರುಗಳಿಗೆ ಈ ಬಾರಿ ಶೇಕಡಾ 8 ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು.
ರಬ್ಬರ್ ಬೆಳೆಗಾರರಿಗೆ ಕೆಜಿಗೆ ರೂ.2ರಂತೆ ಪ್ರೋತ್ಸಾಹಧನ ವಿತರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಪೆರುಮುಂಡ , ನಿರ್ದೇಶಕರುಗಳಾದ ದೀನರಾಜ್ ದೊಡ್ಡಡ್ಕ, ಹೊನ್ನಪ್ಪ ಅಮೆಚೂರು, ಧನಂಜಯ ಕೋಡಿ, ಸೀತಾರಾಮ ಕದಿಕಡ್ಕ, ಜಯರಾಮ ನಿಡ್ಯಮಲೆ, ಶ್ರೀಮತಿ ಪ್ರಮೀಳ ಬಂಗಾರಕೋಡಿ, ಶ್ರೀಮತಿ ಪುಷ್ಪಾವತಿ ವ್ಯಾಪಾರೆ, ಪ್ರದೀಪ್ ಕೆ.ಎಂ., ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ್ ಬಂಗಾರಕೋಡಿ, ಜಯರಾಮ ಪಿ.ಟಿ. , ಕೊಡುಗು ಡಿ.ಸಿ.ಸಿ. ಬ್ಯಾಂಕ್ ಶಾಖಾ ವ್ಯವಸ್ಥಾಪಕ ಹಾಗೂ ಸಹಕಾರಿ ಸಂಘದ ಮೇಲ್ವಿಚಾರಕ ಶ್ರೀನಿವಾಸ ಕೆ.ಜಿ. ಉಪಸ್ಥಿತರಿದ್ದರು.
ಸಭೆಯಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು ಸೇರಿದಂತೆ ಸಹಕಾರಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಸ್ವಾಗತಿಸಿ, ನಿರ್ದೇಶಕಿ ಶ್ರೀಮತಿ ಪ್ರಮಿಳ ಬಂಗಾರಕೋಡಿ ವಂದಿಸಿದರು.