ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

101.53 ಕೋಟಿ ವಾರ್ಷಿಕ ವ್ಯವಹಾರ 45,09,268 ಲಕ್ಷ ನಿವ್ವಳ ಲಾಭ

ಸದಸ್ಯರಿಗೆ ಶೇ.15 ಡಿವಿಡೆಂಡ್ ವಿತರಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ಸಮನ್ವಯ ಸಭಾಂಗಣದಲ್ಲಿ ಸೆ.17ರಂದು ಜರುಗಿತು.

ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಅಧ್ಯಕ್ಷತೆ ವಹಿಸಿದ್ದರು.

ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಮಾತನಾಡಿ ಸಂಘವು ಈ ಬಾರಿ 101.53 ಕೋಟಿಯಷ್ಟು ವಾರ್ಷಿಕ ವ್ಯವಹಾರ ನಡೆಸಿದ್ದು, 45, 09, 268 ಲಕ್ಷ ರೂ. ನಿವ್ವಳ ಲಾಭ ಪಡೆದುಕೊಂಡಿದೆ. ಸದಸ್ಯರುಗಳಿಗೆ ಈ ಬಾರಿ ಅತೀ ಹೆಚ್ಚು ಶೇ.15 ಪ್ರತಿಶತ ಡಿವಿಡೆಂಡ್ ವಿತರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಸಹಕಾರಿ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಸದಸ್ಯರಾದ ನಿರ್ದೇಶಕ ಕೆ.ಪಿ. ಜಾನಿ ಕಲ್ಲುಗುಂಡಿ ಹಾಗೂ ಎಂಟು ವರ್ಷದಿಂದ ಸಹಕಾರಿ ಸಂಘದ ಮೇಲ್ವಿಚಾರಕರಾಗಿರುವ ಸಂಘದ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಅವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ದಿನಗೂಲಿ ನೌಕರರಿಗೆ, ದೈನಿಕ ಠೇವಣಿ ಸಂಗ್ರಾಹಕರರಿಗೆ, ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವ ಧನ ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪುರಸ್ಕಾರ

ಸಭೆಯಲ್ಲಿ ಎಸ್.ಎಸ್. ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಹಕಾರಿ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಪ್ರೋತ್ಸಾಹಕ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಅವರು ಸಂಘದ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ನಿರ್ದೇಶಕರುಗಳಾದ ಗಣಪತಿ ಭಟ್, ಶ್ರೀಮತಿ ಸುಮತಿ ಶಕ್ತಿವೇಲು, ಶ್ರೀಮತಿ ಬಿ.ಎಸ್. ಯಮುನ, ಜಗದೀಶ್ ರೈ ಸಂಪಾಜೆ, ಆನಂದ ಪಿ.ಲ್, ಶ್ರೀಮತಿ ಉಷಾ ಕೆ.ಎಂ., ಹಮೀದ್ ಹೆಚ್., ಕೆ.ಪಿ. ಜಾನಿ, ಚಂದ್ರಶೇಖರ ಕೆ.ಎಂ., ಶ್ರೀಮತಿ ಸುಶೀಲ ಬಿ., ಪ್ರಕಾಶ್ ಕೆ.ಪಿ., ಶ್ರೀಮತಿ ರಾಜೀವಿ ಕೆ. ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.

ಸಭೆಯಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸಹಕಾರಿ ಸಂಘದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.