ಗುತ್ತಿಗಾರು ಪ್ರಾ. ಕೃ. ಪ. ಸಂ. ವತಿಯಿಂದ ಶಿವಪ್ರಕಾಶ್ ಕಡಪಳರಿಗೆ ಗೌರವ

0

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಕಾರಿ ಮಾರ್ಟ್ ನಿಂದ ಅತ್ಯಂತ ಹೆಚ್ಚು ದಿನಸಿ ಖರೀದಿಸಿದವರಿಗಾಗಿ ಕೊಡುವ ಗೌರವವನ್ನು ಶಿವಪ್ರಕಾಶ್ ಕಡಪಳ ಅವರು ಪಡೆದರು.

ಸೊಸೈಟಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಸೆ. 17ರಂದು ಈ ಗೌರವವನ್ನು ಶಾಲು ಹೊದಿಸಿ, ಹಾರ, ಸ್ಮರಣಿಕೆ ನೀಡಿ ಗೌರವಿಸಿದರು. ಮಹಾ ಸಭೆಯಲ್ಲಿ ಹಾಜರಾಗಲು ಸಾದ್ಯವಾಗದ ಕಾರಣ ಈ ಗೌರವವನ್ನು ಇಂದು ಸಲ್ಲಿಸಲಾಯಿತು ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ ಮತ್ತಿತರರು ಉಪಸ್ಥಿತರಿದ್ದರು.