ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಉತ್ಸವ – 2024

0

ಸುಳ್ಯ ನಗರದ ವಾರ್ಡ್ ಗಳಲ್ಲಿ ಆಮಂತ್ರಣ ಪತ್ರಿಕೆ ವಿತರಣೆ

ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಉತ್ಸವ ಸಮಿತಿಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ನಗರದ ವಾರ್ಡ್ ಗಳಲ್ಲಿ ವಿತರಿಸಲಾಯಿತು.

ಸುಳ್ಯನಗರದ ಎಲ್ಲಾ ವಾರ್ಡ್ ಗಳಲ್ಲಿ ಈಗಾಗಲೇ ವಾರ್ಡ್ ಸಮಿತಿಗಳನ್ನು ರಚಿಸಲಾಗಿದ್ದು, ಪ್ರತೀ ವಾರ್ಡ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಂಚಾಲಕರು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆ ಹಂಚಲಾಯಿತು.

ಈಗಾಗಲೇ ಸುಳ್ಯ ನಗರದ ಶಾಂತಿನಗರ, ಬೀರಮಂಗಲ, ನಾವೂರು, ಜಯನಗರ, ಕೊರಂಬಡ್ಕ, ದುಗಲಡ್ಕ, ಕೊಯಿಕುಳಿ ಸೇರಿದಂತೆ ಬಹುತೇಕ ವಾರ್ಡ್ ಗಳಲ್ಲಿ ಸಭೆ ನಡೆಸಿ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು, ಆಯಾ ವಾರ್ಡ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.