ಉಬರಡ್ಕ ಗ್ರಾ.ಪಂಚಾಯತ್ ನಲ್ಲಿ ಪಿ.ಡಿ.ಓ ವಿದ್ಯಾಧರ್ ರಿಗೆ ಬೀಳ್ಕೊಡುಗೆ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಓ ಮತ್ತು ಕಾರ್ಯದರ್ಶಿಯಾಗಿ ಸುಮಾರ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಈಗ ವರ್ಗಾವಣೆಯಾದ ವಿದ್ಯಾಧರ್ ರವರಿಗೆ ಸೆ.18 ರಂದು ಬೀಳ್ಕೊಡುಗೆ ಸಮಾರಂಭವು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಮಮತಾ ಕುದ್ಪಾಜೆ, ಶ್ರೀಮತಿ ಭವಾನಿ ಮೂರ್ಜೆ, ಅನಿಲ್ ಬಳ್ಳಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಆಶಾಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.