ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ಪದವಿ ಪ್ರದಾನ ಮತ್ತು ಕಾಲೇಜು ಡೇ

0

ನಿಮ್ಮ ಉತ್ತಮ ಸೇವೆಯಿಂದ‌ ಸಮಾಜದಲ್ಲಿ ಸ್ವಾಸ್ಥ್ಯ ಉಳಿಯಲು ಸಾಧ್ಯ : ಎಸ್.ಎಲ್. ಭೋಜೇ ಗೌಡ


ವೈದ್ಯಕೀಯ ಪದವಿಯನ್ನು ಪಡೆದ ನಿಮಗೆ‌ ಬಹಳಷ್ಟು ಜವಾಬ್ದಾರಿ ಇದೆ. ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ. ಸುಳ್ಯದಂತ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ದಿಂದ ಮೆಡಿಕಲ್ ಕಾಲೇಜು ತನಕದ ಶಿಕ್ಷಣ ಸಂಸ್ಥೆಗಳನ್ನು ಕುರುಂಜಿಯವರು ಸ್ಥಾಪಿಸಿರುವುದರಿಂದ‌ ಇವತ್ತು ನಿಮ್ಮಂತ ವೈದ್ಯರು ಹುಟ್ಟಿ ಬರುವುದಕ್ಕೆ ಸಾಧ್ಯವಾಯಿತು. ಅಂತಹ ಮಹಾನ್ ವ್ಯಕ್ತಿಯ ಕಾಲಿಗೆ ನಾ‌ನಿವತ್ತು ನಮಸ್ಕರಿಸುತ್ತೇನೆ. ನಿವೆಲ್ಲರು‌ ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಮಾಡಿ ಎಂದು ಎಸ್. ಎಲ್ ಭೋಜೇ ಗೌಡ ಹೇಳಿದರು. ಅವರು. ಸೆ. 21ರಂದು ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಪದವಿ ಪ್ರದಾನ ಮತ್ತು ಕಾಲೇಜು ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.


ಎ.ಒ.ಎಲ್.ಇ. ಕಮಿಟಿ ಬಿ ಚಯರ್ ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಹಿ ಶುಭ ಹಾರೈಸಿದರು. ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ರೋಗಿಗಳ ಜೊತೆ ಹೇಗೆ ನೀವು ನಗುಮೊಗದ ಸೇವೆ ನೀಡುತ್ತಿರೋ ಅದರಲ್ಲಿ ನಿಮ್ಮ ವೈದ್ಯಕೀಯ ಭವಿಷ್ಯ ಇದೆ. ತಂದೆ ತಾಯಿ, ಗುರುಗಳು ಮತ್ತು ಹಿರಿಯರನ್ನು ಗೌರವಿಸಿ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಕಾಲೇಜಿನ ವರದಿ ವಾಚಿಸಿದರು. ಡಾ. ರೇಣುಕಾಪ್ರಸಾದ್ ಕೆ.ವಿ. ಮೆಡಲ್ ಮತ್ತು ಪ್ರಮಾಣ ಪತ್ರ ವಿತರಿಸಿದರು. ಡಾ. ಶೈಲಾ ಎಂ. ಆಡಳಿತಾತ್ಮಕ ಪ್ರಮಾಣ ವಚನ ಬೋಧಿಸಿದರು. ಡಾ. ಎಂ.ಎಂ. ದಯಾಕರ್ ಎಸ್.ಎಲ್. ಭೋಜೇ ಗೌಡರನ್ನು ಸಭೆಗೆ ಪರಿಚಯಿಸಿದರು. ಡಾ. ರೇಣುಕಾಪ್ರಸಾದ್ ಕೆ.ವಿ. ಬೋಜೇ ಗೌಡರನ್ನು ಸನ್ಮಾನಿಸಿ ಗೌರವಿಸಿದರು. ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಡಾ. ಅನುಜ್ಞಾ ಬಾಲೆಂಬಿಯವರಿಗೆ ಡಾ. ರೇಣುಕಾಪ್ರಸಾದ್ ಕೆ.ವಿ. ಚಿನ್ನದ ಪದಕ ನೀಡಿ ಗೌರವಿಸಿದರು. ಎ.ಒ.ಎಲ್.ಇ. ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಂಶೋಧನಾ ವಿಭಾಗದ ಸಾಧಕರಿಗೆ ಡಾ‌. ಉಜ್ವಲ್ ಯು.ಜೆ ಪ್ರಾಮಾಣ ಪತ್ರ ವಿತರಿಸಿದರು. ಎ.ಒ.ಎಲ್. ಇ. ಕಮಿಟಿ ಬಿ ನಿರ್ದೇಶಕ ಮೌರ್ಯ ಆರ್. ಪ್ರಸಾದ್ ಕ್ರೀಡಾ ಸಾಧಕರನ್ನು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಜಾಕೆ ಮಾಧವ ಗೌಡ ಕಾಲೇಜಿನ ಮ್ಯಾಗಜೀನ್ ಬಿಡುಗಡೆಗೊಳಿಸಿದರೆ, ಎನ್.ಎ. ರಾಮಚಂದ್ರ ಬ್ಯಾಚ್ ಮ್ಯಾಗಜೀನ್ ಬಿಡುಗಡೆಗೊಳಿಸಿದರು. ಫಾತಿಮತ್ ಶಿಧಾ ಮತ್ತು ಆದರ್ಶ್ ಪದವಿ ಪಡೆದ ವಿದ್ಯಾರ್ಥಿಗಳ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಮನೋಜ್ ಅಡ್ಡಂತಡ್ಕ ವಂದಿಸಿದರು.


ಕಾಲೇಜಿನ ಪಿಜಿ
ಡೈರೆಕ್ಟರ್ ಮತ್ತು ವಿಭಾಗ‌ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್, ಡಾ. ಕೃಷ್ಣಪ್ರಸಾದ್, ಡಾ. ದಯಾಕರ್, ಡಾ. ನುಶ್ರತ್ ಫರೀದ್, ಡಾ. ಸುಹಾಸ್ ರಾವ್, ಡಾ. ಪ್ರಸನ್ನ ಕುಮಾರ್, ಡಾ. ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ಡೇ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.