ಅಜ್ಜಾವರ ಗ್ರಾಮದ ದೊಡ್ಡೇರಿ ಶಾಲಾ ಮೈದಾನದಲ್ಲಿ ತೆಂಗಿನ ಗಿಡಗಳನ್ನು ನೆಡುವುದಕ್ಕೆ ಊರವರು ಆಕ್ಷೇಪ ವ್ಯಕ್ತ ಪಡಿಸಿರುವ ಘಟನೆ ವರದಿಯಾಗಿದೆ.
ಊರವರು ಹಾಗೂ ಸಂಘ ಸಂಸ್ಥೆಗಳವರು ಸೇರಿ ೫ ಬಾರಿ ಎನ್.ಎಸ್.ಎಸ್. ಕ್ಯಾಂಪ್ ಮಾಡಿ ಈ ಶಾಲಾ ಮೈದಾನ ನಿರ್ಮಾಣ ಮಾಡಲಾಗಿದೆ. ಇದೀಗ ತೆಂಗಿನ ಗುಂಡಿ ತೆಗೆಯಲಾಗಿದ್ದು, ಅದರಲ್ಲಿ ನೀರು ತುಂಬಿದರೆ ಮಕ್ಕಳು ಬೀಳಿವ ಸಾಧ್ಯತೆ ಇದ್ದು ಕೂಡಲೇ ಮುಚ್ಚಬೇಕು. ಹಾಗೂ ತೆಂಗಿನ ಗಿಡ ನೆಟ್ಟು ಮರ ಆದ ನಂತರ ಅದರ ಗರಿ, ತೆಂಗಿನಕಾಯಿ ಮಕ್ಕಳ ಮೇಲೆ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಗುಂಡಿ ಮುಚ್ಚಬೇಕೆಂದು ಹಾಗೂ ಈ ಮೈದಾನ ಶಾಲಾ ಮಕ್ಕಳಿಗೆ ಆಟವಾಡಲು ಹಾಗೂ ಊರವರಿಗೆ ಕಾರ್ಯಕ್ರಮ ನಡೆಸಲು ಇರಬೇಕು ಎಂದು ಊರವರು ಮುಖ್ಯೋಪಾಧ್ಯಾಯರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ತೆಂಗಿನ ಗಿಡ ನೆಡಲು ಇನ್ನೂ ಶಾಲಾ ವಠಾರದಲ್ಲಿ ಜಾಗವಿದ್ದು ಆ ಜಾಗದಲ್ಲಿ ಗಿಡಗಳನ್ನು ನೆಡುವಂತೆ ವಿನಂತಿ ಮಾಡಿದ್ದಾರೆ. ಮನವಿಯನ್ನು ಪುರಸ್ಕರಿಸದೇ ಇದ್ದರೆ ಹೋರಾಟ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದರನ್ನು ಸಂಪರ್ಕಿಸಿ ವಿಚಾರಿಸಿದಾಗ, ಮೈದಾನದ ಬದಿಯಲ್ಲಿ ಗುಂಡಿ ತೆಗೆದು ಗಿಡ ನೆಡಲು ಉzಶಿಸಲಾಗಿತ್ತು. ಈಗ ಆಕ್ಷೇಪಣೆ ಬಂದಿರುವುದರಿಂದ ಸೆ.೨೩ರಂದು ಎಸ್.ಡಿ.ಎಂ.ಸಿ. ಹಾಗೂ ಊರವರ ಸಭೆ ಕರೆದಿzವೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.