ನಿವ್ವಳ ಲಾಭ- 4.9 ಲಕ್ಷ, 1.08% ಬೋನಸ್ ವಿತರಣೆ
ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷೆ ಶ್ರೀಮತಿ ಪಾರ್ವತಿ ನೇಣಾರು ರವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿ ಸಭಾಭವನದಲ್ಲಿ ಸೆ. 23 ರಂದು ನಡೆಯಿತು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶ್ರೀಮತಿ ತುಳಸಿ ಹೆಚ್ ರವರು ಮಂಡಿಸಿದರು.
ಸಂಘದಲ್ಲಿ ಪ್ರಸ್ತುತ ಮಂದಿ 449 ಸದಸ್ಯರು ಇದ್ದಾರೆ. 84 ಮಂದಿ ಸದಸ್ಯರು ನಿರಂತರವಾಗಿ ಸಂಘಕ್ಕೆ ಹಾಲು ಹಾಕುತ್ತಿದ್ದಾರೆ.
ವಾರ್ಷಿಕವಾಗಿ ಜಮಾ ಖರ್ಚಿನ ಜುಮ್ಲಾ 2.99 ಕೋಟಿ ವ್ಯವಹಾರ ಮಾಡಲಾಗಿದೆ. 2023-24 ನೇ ಸಾಲಿನಲ್ಲಿ ವ್ಯಾಪಾರ ವಹಿವಾಟು ತಖ್ತೆ 90.96 ಲಕ್ಷದ ವ್ಯವಹಾರ ನಡೆಸಲಾಗಿದೆ.
ಪ್ರಸ್ತುತ ಸಾಲಿನಲ್ಲಿ ಒಟ್ಟು ಲಾಭ ನಷ್ಟ ತಖ್ತೆಯ ವ್ಯವಹಾರದಲ್ಲಿ ರೂ.11.29 ಲಕ್ಷದ ವ್ಯವಹಾರ ನಡೆದಿದ್ದು ನಿವ್ವಳ ಲಾಭ 4,09,471/- ಲಕ್ಷ ಗಳಿಸಿಕೊಂಡಿದೆ.
ಸಂಘದ ಸದಸ್ಯರಿಗೆ ಬೋನಸ್ ಶೇ. 1.08 ನೀಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದರು.
ದಿನಕ್ಕೆ 500 ಲೀಟರ್ ನಷ್ಟು ಹಾಲು ಸಂಗ್ರಹವಾಗುವಂತೆ ಯೋಜನೆ ರೂಪುಗೊಳಿಸುವ ಬಗ್ಗೆ ಸದಸ್ಯರ ಜತೆ ಚರ್ಚಿಸಲಾಯಿತು.
ಸಿಬ್ಬಂದಿ ವೇತನ ಪರಿಷ್ಕರಣೆಯ ಬಗ್ಗೆ ಅಧ್ಯಕ್ಷರು ತಿಳಿಸಿದರು.
ಹಾಲು ಸಂಗ್ರಹ ಹೆಚ್ಚಿಸುವ ಸಲುವಾಗಿ ಹೈನುಗಾರಿಕೆ ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ಸದಸ್ಯರ ಅಹವಾಲುಗಳು:
ಹಾಲಿನ ಡಿಗ್ರಿ ಲೆವೆಲ್ ಬಾರದಿರುವ ಕಾರಣಕ್ಕೆ ಹಸುಗಳನ್ನು ಮಾರಾಟ ಮಾಡಬೇಕಾಗಿದೆ.
ಪಶು ಆಹಾರಗಳಿಗೆ ದರ ಏರಿಕೆಯಾಗಿರುವುದರಿಂದ ನಿರ್ವಹಣೆ ಮಾಡಲು ಕಷ್ಟ ಸಾಧ್ಯ. ಸರಕಾರದ ಸಬ್ಸಿಡಿ ದರ ಸರಿಯಾದ ಸಮಯಕ್ಕೆ ಬರುವುದಿಲ್ಲ. ರಾಸುಗಳು ಗಬ್ಬ ಕಟ್ಟುವುದಿಲ್ಲ ಇದರಿಂದ ಸಮಸ್ಯೆ ಎದುರಾಗುತ್ತಿದೆ.
ಅನಧಿಕೃತವಾಗಿ ದಲ್ಲಾಳಿಗಳ ಮೂಲಕ ಹೆಚ್ಚು ದರ ನೀಡಿ ಅಕ್ರಮವಾಗಿ ದನಗಳ ಮಾರಾಟಮಾಡಲಾಗುತ್ತಿದೆ ಇದರಿಂದ ಹೈನುಗಾರಿಕೆಗೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸದಸ್ಯರು ಉಲ್ಲೇಖಿಸಿದರು.
ಹಸಿರು ಹುಲ್ಲು ಬೆಳೆಯಬೇಕು.ಒಕ್ಕೂಟದಿಂದ ಸಹಾಯಧನ ಸಬ್ಸಿಡಿ ಸಿಗುತ್ತದೆ. ಗುಣ ಮಟ್ಟದ ಮೇವಿನಿಂದ ಹಾಲು ಉತ್ಪಾದನೆ ಜಾಸ್ತಿಯಾಗುತ್ತದೆ. ರಸ ಮೇವು ಬಳಕೆ ಮಾಡಿದ ಹೈನುಗಾರರು ಒಳ್ಳೆಯ ಉತ್ಪಾದನೆ ಹಾಗೂ ಗುಣ ಮಟ್ಟದ ಹಾಲು ಪಡೆದು ಉತ್ತಮ ಆದಾಯ ಗಳಿಸಬಹುದು.
ಒಕ್ಕೂಟದ ವತಿಯಿಂದ ಹೈನುಗಾರರಿಗೆ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ
ಹರೀಶ್ ಕುಮಾರ್ ತಿಳಿಸಿದರು.
ಅಕ್ಕೋಜಿ ಪಾಲ್ ನಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದರು.
ಗಂಡು ಕರುಗಳು ಹುಟ್ಟುವುದರಿಂದ ಹೈನುಗಾರರು ಸಮಸ್ಯೆ ಎದುರಿಸಬೇಕಾಗಿದೆ. ಒಕ್ಕೂಟದ ವತಿಯಿಂದ ಅಂತಹ ಕರುಗಳು ದೊಡ್ಡದಾದ ನಂತರ ಗೋಶಾಲೆಗೆ ರವಾನಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಹಾಗೂ
ಅಕ್ಕೋಜಿ ಪಾಲ್ ನಲ್ಲಿ ಸಂಘ ಸ್ಥಾಪಿಸುವ ಬಗ್ಗೆ ರಾಘವೇಂದ್ರ ಪುಳಿಮಾರಡ್ಕ ರವರು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ಅತೀ ಹೆಚ್ಚು ಅಂಕ ಗಳಿಸಿದ ಸಂಘದ
ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಕೆ.ನಾಯ್ಕ್,ನಿರ್ದೇಶಕರಾದ ಶ್ರೀಮತಿ ಭವ್ಯ ಕೆ, ಶ್ರೀಮತಿ ನಂದಿನಿ, ಶ್ರೀಮತಿ , ಶ್ರೀಮತಿ ಪೂರ್ಣಿಮಾ ಎ.ವೈ, ಶ್ರೀಮತಿ ಚಿತ್ರಕಲಾ ಕೆ, ಶ್ರೀಮತಿ ಅಂಕಿತಾ ಕೆ.ಎಸ್, ಶ್ರೀಮತಿ ಪ್ರಸನ್ನ ಕುಮಾರಿ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಶಶಿಕಲಾ ಪಿ, ಶ್ರೀಮತಿ ಕುಸುಮಾವತಿ ,ಕಾರ್ಯದರ್ಶಿ ಶ್ರೀಮತಿ ತುಳಸಿ ಹೆಚ್ ಉಪಸ್ಥಿತರಿದ್ದರು. ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ವಂದಿಸಿದರು.
ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸಿಬ್ಬಂದಿಗಳಾದ ಶ್ರೀಮತಿ ದಿವ್ಯ ಐ, ಶ್ರೀಮತಿ ದಮಯಂತಿ, ಶ್ರೀಮತಿ ಸರೋಜ ರವರು ಸಹಕರಿಸಿದರು.