ಕೊಡಗು ಸಂಪಾಜೆ ಪಯಸ್ವಿನಿ ಯುವಕ ಸಂಘ ವತಿಯಿಂದ ಸ್ವಚ್ಛತಾ ಅಭಿಯಾನ

0

ಕೊಡಗು ಸಂಪಾಜೆ ಗ್ರಾಂ.ಪಂ ವ್ಯಾಪ್ತಿಯಲ್ಲಿ ಪಯಸ್ವಿನಿ ಯುವಕ ಸಂಘ (ರಿ) ಹಾಗೂ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯರಸ್ತೆ ಹಾಗೂ ಸದರಿ ಕಚೇರಿಯ ಆಸುಪಾಸಿನಲ್ಲಿ ” ಸ್ವಚ್ಛತೆಯೇ ಸೇವೆ” ಸ್ವಚ್ಛತಾ ಅಭಿಯಾನವು ಸೆ 23 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತೀರ್ಥಪ್ರಸಾದ್ ದುಗ್ಗಳ ವಹಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶಭರೀಶ್ ಕುದ್ಕುಳಿ ಸ್ವಚ್ಛತಾ ಪ್ರತಿಜ್ಞೆಯನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.