ಕಾನೂನು ಸೇವೆಗಳ ಸಮಿತಿ ಸುಳ್ಯ , ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಲೆಟ್ಟಿ ಮಿತ್ತಡ್ಕ ಸುಳ್ಯಹಾಗೂ ವಕೀಲರ ಸಂಘ, ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 23 ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ ಅಧ್ಯಕ್ಷರಾದ ಶ್ರೀ ಬಿ ಮೋಹನ್ ಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿ , ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಯುವ ಜನಾಂಗ ಅರಿವಿನ ಕೊರತೆಯಿಂದ, ಹಾದಿ ತಪ್ಪುವ ಸಾಧ್ಯತೆಯನ್ನು ತಡೆಗಟ್ಟಲು ಕಾನೂನು ಶಿಕ್ಷಣದಿಂದ ಸಾಧ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರೊ.ಎಮ್ ಯೋಗಿತಾ ಗೋಪಿನಾಥ್ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ಸಹಾಯಕ ಸರಕಾರಿ ಅಭಿಯೋಜಕರಾದ ರಮೇಶ್ ಆರ್, ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ. ಪಿಪಿ ಪಿಹೆಚ್ ಎಫ್ ಪ್ರಭಾಕರನ್ ನಾಯರ್, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿ, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸಾವಿತ್ರಿ ಕಣೆಮರಡ್ಕ, ಗ್ರಂಥಾಲಯ ಮೇಲ್ವಿಚಾರಕರು ಮತ್ತು ಕಾರ್ಯದರ್ಶಿ, ಕರ್ನಾಟಕ ರಾಜ್ಯ ಗ್ರಂಥಾಲಯ ನೌಕರರ ಸಂಘ, ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ವೀಣಾ ಶೇಡಿಕಜೆ ಇವರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ಯಶಸ್ವಿ ಪಿ ಭಟ್ ,ಅವನಿ ಎನ್, ವೈಷ್ಣವಿ ಕೆ, ಪ್ರಾರ್ಥನೆಗೈದು,ಉದ್ಘಾಟನ ಸಮಾರಂಭದ ವಂದನಾರ್ಪಾಣೆಯನ್ನು ಉಪನ್ಯಾಸಕಿ ಶ್ರೀಮತಿ ಸರಿತಾ ಕೆ ಗೈದರು , ಉಪನ್ಯಾಸಕಿ ಶ್ರೀಮತಿ ಜ್ಯೋತ್ಸ್ನ ದಿನೇಶ್ ಮತ್ತು ವಿದ್ಯಾರ್ಥಿನಿ ಭಾನವಿ ಕೊೖಂಗಾಜೆ, ಕಾರ್ಯಕ್ರಮ ನಿರೂಪಿಸಿದರು.