ಮಂಡೆಕೋಲು ಗ್ರಾಮದ ಮಾರ್ಗ ನಿವಾಸಿ ದೊಡ್ಡಮನೆ ಪೋಕರೆ ಹಾಜಿಯವರು ಅಸೌಖ್ಯದಿಂದ ಸೆ.27ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.
ಪೋಕರೆ ಹಾಜಿಯವರು ಮಂಡೆಕೋಲು ಮಾರ್ಗ ಮಸೀದಿಯ ಅಧ್ಯಕ್ಷರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಮರಿಯಮ್ಮ, ಪುತ್ರರಾದ ಮಹಮ್ಮದ್ ಕುಂಞಿ, ಅಬ್ದುಲ್ ಹಮೀದ್, ಮಹಮ್ಮದ್ ಶರೀಫ್, ಮಹಮ್ಮದ್ ಶಿಹಾಬ್, ಪುತ್ರಿಯರಾದ ತಾಜುನ್ನೀಸಾ, ಝೌರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.