ಅ.12 : ಬೆಳ್ಳಾರೆಯಲ್ಲಿ 37 ನೇ ವರ್ಷದ ಶ್ರೀ ಶಾರದೋತ್ಸವ

0

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 37 ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮವು ಅ.12 ರಂದು ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ನಡೆಯಲಿದೆ.
ಪೂರ್ವಾಹ್ನ ಗಂಟೆ 8.30 ಕ್ಕೆ ಶಾರದಾ ಪ್ರತಿಷ್ಠೆ,ಪೂಜೆ ನಡೆಯಲಿದೆ.
9.30 ರಿಂದ ಗಂಟೆ 12 ರವರೆಗೆ ವಿದ್ಯಾರಂಭ ( ಅಕ್ಷರಾಭ್ಯಾಸ,)ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ ಇತ್ಯಾದಿ ಸೇವೆಗಳು ನಡೆಯಲಿದೆ.
ಬೆಳಿಗ್ಗೆ ಗಂಟೆ 10.00 ರಿಂದ 12 .00 ರವರೆಗೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ ಇವರಿಂದ ಭಜನೆ ನಡೆಯಲಿದೆ.


12.30 ರಿಂದ ಗಂಟೆ 2.00 ರವರೆಗೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00 ರಿಂದ 4.00 ರವರೆಗೆ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ದೇವಿನಗರ ಕೊಳಂಬಳ ಹಾಗೂ ಶ್ರೀ ಜಲದುರ್ಗಾದೇವೀ ಭಜನಾ ಮಂಡಳಿ ಪೆರುವಾಜೆ ಇವರಿಂದ ಭಜನೆ ನಡೆಯಲಿದೆ.
ಸಂಜೆ ಗಂಟೆ 6.30 ರಿಂದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇವರಿಂದ “ನೃತ್ಯ ವೈಭವ” ನಡೆಯಲಿದೆ.
ರಾತ್ರಿ ಗಂಟೆ 9.30 ರಿಂದ ಮಹಾಪೂಜೆ,ಪ್ರಸಾದ ವಿತರಣೆ,ಶೋಭಾಯಾತ್ರೆ ನಡೆದ ಬಳಿಕ ಜಲಸ್ತಂಭನ ನಡೆಯಲಿದೆ.