ಪೋಸ್ಟ್ ಮೂಲಕ ಬೆಸುಗೆ ಗೊಳಿಸಿ ಇಹಲೋಕ ತ್ಯಜಿಸಿದ ಅಂಚೆಯಣ್ಣ

0

ಅಂಚೆಣ್ಣನ ಸರ್ವಿಸ್ ಗೆ ಧರ್ಮ ಮರೆತು ಧನಸಹಾಯ ಮಾಡಿದ ಕೊಲ್ಲಮೊಗ್ರದ ಜನತೆ

ದಿl ಅಬ್ದುಲ್ ಜಬ್ಬಾರ್ ಕುಟುಂಬದ ಸಂಕಷ್ಟಕ್ಕೆ ಮಿಡಿದ ಗ್ರಾಮಸ್ಥರು

ಸಂಗ್ರಹವಾದ 1 ಲಕ್ಷದ 23 ಸಾವಿರದ 650 ರೂಪಾಯಿ ಧನಸಹಾಯ ಹಸ್ತಾಂತರ

ಅದೆಂತಹ ಗಾಳಿ, ಮಳೆ ಇದ್ದರೂ, ಅದೆಷ್ಟೆ ಕಷ್ಟದ ದಾರಿಯಿದ್ದರೂ ಸಮಯಕ್ಕೆ ಸರಿಯಾಗಿ ಅಂಚೆಪತ್ರ ಮನೆಗೆ‌ ಮುಟ್ಟುತ್ತಿತ್ತು. ಅಂಚೆಕಚೇರಿಯ ಸೇವೆ ಪ್ರಾಮಾಣಿಕವಾಗಿ ಗ್ರಾಹಕರಿಗೆ ದೊರೆಯುತ್ತಿತ್ತು. ಅಂತಹ ವ್ಯಕ್ತಿಗಳನ್ನು ಜನರು‌ ಮರೆಯುವುದಿಲ್ಲ. ಅದಕ್ಕೆ ಉದಾಹರಣೆಯಾಗಿ
ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ(ತಂಬಿನಡ್ಕ) ಎಂಬಲ್ಲಿ ವಾಸ್ತವ್ಯವಿದ್ದ ಅಜಾತ ಶತ್ರು ಅಂಚೆಯಣ್ಣ ದಿl ಅಬ್ದುಲ್ ಜಬ್ಬಾರ್ ರವರು. ಆರ್ಥಿಕ ಸಂಕಷ್ಟದಲ್ಲಿದ್ದ ಜಬ್ಬಾರ್ ರವರ ಮನೆಯವರಿಗೆ ಬರೋಬ್ಬರಿ ಒಂದು ಕಾಲು ಲಕ್ಷ ಸಂಗ್ರಹಿಸಿ ಅವರ ಮನೆಯವರಿಗೆ ಹಸ್ತಾಂತರಿಸಿ ಮನವೀಯತೆಗೆ ಸಾಕ್ಷಿಯಾದವರು ಕೊಲ್ಲಮೊಗ್ರ ಭಾಗದ ಗ್ರಾಮಸ್ಥರು.

ಆ.13 ರಂದು ಅಬ್ದುಲ್ ಜಬ್ಬಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು .
ಅಕಾಲಿಕವಾಗಿ ನಿಧನರಾಗಿ ವಿಧಿವಶರಾಗಿದ್ದ ಅವರ ನಿಧನದಿಂದ ಆರ್ಥಿಕ ವಾಗಿ ಸಂಕಷ್ಟದಲ್ಲಿದ್ದ ಮನೆಯವರು ಮತ್ತಷ್ಟು ಸಂಕಷ್ಟಕ್ಕೆ ಬಿದ್ದಿದ್ದರು. ಜಬ್ಬಾರ್ ರವರು ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ಕೊಲ್ಲಮೊಗ್ರದ ಜನತೆಯ ಪ್ರೀತಿ ಗಳಿಸಿದ್ದರು. ಹೀಗಾಗಿ ಮಾನವೀಯತೆ ನೆಲೆಯಲ್ಲಿ ತಮ್ಮ ತಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡ ಬೇಕೆನ್ನುವ ಉದ್ದೇಶದಿಂದ ಕೊಲ್ಲಮೊಗ್ರದ ಸ್ಥಳೀಯರು ಸೇರಿ ಹಣ ಸಂಗ್ರಹಿಸಿದ್ದಾರೆ. ಅದರಂತೆ 1,23,659 ರೂಪಾಯಿ ಸಂಗ್ರಹವಾಗಿತ್ತು.‌ ಸಂಗ್ರಹವಾದ ಮೊತ್ತವನ್ನು ಸೆ.26ರಂದು ಕೊಲ್ಲಮೊಗ್ರು ಅಂಚೆ ಕಚೇರಿಯ ಬಳಿ ಜಬ್ಬಾರ್ ರವರ ಮನೆಯವರಿಗೆ ಹಸ್ತಾಂತರರಿಸಿದ್ದಾರೆ.

ಧನ ಸಂಗ್ರಹದಲ್ಲಿ ಟಿ. ಶ್ರೀಧರ್ ನಾಯರ್, ಶೇಖರ್ ಅಂಬೆಕಲ್ಲು, ಸಚಿತ್ ಶಿವಾಲ, ಶ್ರೀಮತಿ ಹೇಮಲತ ಶುಭಕರ ಕೊಮ್ಮೆಮನೆ, ದಿನೇಶ್ ಕುಮಾರ್ ಮಡ್ತಿಲ, ಅನಂತರಾಮ ಮಣಿಯಾನ ಮತ್ತಿತರರು ಮುತುವರ್ಜಿ ವಹಿಸಿ ಗ್ರಾಮಸ್ಥರಿಂದ ಹಣ ಸಂಗ್ರಹ ಮಾಡಲು ಕೈಜೋಡಿಸಿದರು.