ಜೀವ ಬೆದರಿಕೆ ಆರೋಪ : ಇಬ್ರಾಹಿಂ ಖಲೀಲ್ ಎಂಬವರಿಂದ ಬೆಳ್ಳಾರೆ ಪೋಲೀಸರಿಗೆ ದೂರು

0

ಬೆಳ್ಳಾರೆಯ ಜಮಾಲ್ ಮತ್ತು ಅಝರುದ್ದೀನ್ ಎಂಬವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಮುರುಳ್ಯದ ಅಹ್ಮದ್ ಬ್ಯಾರಿ ಎಂಬವರ ಪುತ್ರ ಇಬ್ರಾಹಿಂ ಖಲೀಲ್ ಬೆಳ್ಳಾರೆ ಪೋಲೀಸರಿಗೆ ದೂರು ನೀಡಿದ್ದಾರೆ.

ಬೆಳ್ಳಾರೆ ಪೋಲೀಸರಿಗೆ ದೂರು ನೀಡಿರುವ ಇಬ್ರಾಹಿಂ ಖಲೀಲ್ ರವರು, 2018ರಿಂದ ಬೆಳ್ಳಾರೆಯ ಜಮಾಲ್ ಮತ್ತು ಅಝರುದ್ದೀನ್ ಎಂಬವರು ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಪರಿಚಯವಿಲ್ಲದ ನಂಬರ್ ನಿಂದ ಕಾಲ್ ಗಳು ಬರುತ್ತಿದೆ ಎಂದು ಉಲ್ಕೇಖಿಸಿದ್ದಾರಲ್ಲದೆ, ಸೆ.27 ರಂದು ನಾನು‌ ಬೆಳ್ಳಾರೆಗೆ ಹೋಗಿದ್ದಾಗ ನನ್ನ ಬೈಕನ್ನು ಹಿಂಬಾಲಿಸಿಕೊಂಡು ಕೆಎ 21 ಎಂ 6140 ನಂಬರಿನ ಕಾರಿನಲ್ಲಿ ಬಂದು ಢಿಕ್ಕಿ ಹೊಡೆಯಲು ಯತ್ನಿಸಿದ್ದಾರೆ. ನನಗೆ ಜೀವ ಭಯವಿದೆ. ಆದ್ದರಿಂದ ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.